‘ಜೀವನ ಮೌಲ್ಯ’ ಲೇಖಕ ಯತಿರಾಜ್ ವೀರಾಂಬುಧಿ ಅವರು ಬರೆದ ವ್ಯಕ್ತಿತ್ವ ವಿಕಸನ ಲೇಖನಗಳ ಸಂಕಲನ. ಇಲ್ಲಿನ ಹಲವು ಲೇಖನಗಳು ಅಧ್ಯಾತ್ಮ ಪತ್ರಿಕೆ-ಮಲ್ಲಾರ ಮಾಸಿಕದಲ್ಲಿ ಪ್ರಕಟಗೊಂಡಿದ್ದವು. ಮಹಾಭಾರತದಲ್ಲಿ ಶ್ರೀವಿಷ್ಣು ಸಹಸ್ರನಾಮದ ಅನೇಕ ನಾಮಗಳು ಮನುಷ್ಯರಿಗೆ ಇರಬೇಕಾದ ಗುಣಗಳನ್ನು ಸಾರುತ್ತವೆ.ಇವುಗಳಲ್ಲಿ ಕೆಲವನ್ನು ಆರಿಸಿ, ಅನೇಕ ಗ್ರಂಥಗಳ ಸಾರವನ್ನು ಕ್ರೋಢಿಕರಿಸಿ ಬರೆಯಲಾಗಿದೆ.
ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು- ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...
READ MORE