ಅಧ್ಯಾತ್ಮ ಗುರು ಎಂದೇ ಖ್ಯಾತಿಯ ಸ್ವಾಮಿ ಸುಖಬೋಧಾನಂದ ಅವರ ಕೃತಿ-ಜೀವನದ ಸಂವರ್ಧನೆ; ಆಂತರಿಕ ಜಾಗೃತಿಯ ಕಲೆ. ವ್ಯಕ್ತಿಯಲ್ಲಿ ಆಂತರಿಕವಾಗಿ ಜಾಗೃತಿಯೇ ನೈಜ ಅರಿವು. ಈ ಅರಿವು ಎಲ್ಲಿಯವರೆಗೆ ಆಗುವುದಿಲ್ದಲವೋ ಆತನ ಜಾಣ್ಮೆ ಎಷ್ಟಿದ್ದರೂ ವ್ಯರ್ಥ. ಜೀವನ ಸಂವರ್ಧನೆಗೆ ಆಂತರಿಕ ಅರಿವು ಮುಖ್ಯ. ಕೆಲವೊಬ್ಬರಿಗೆ ಇದು ದೈವದತ್ತವಾಗಿ, ಕೆಲವೊಬ್ಬರು ಈ ಕಲೆಯನ್ನು ತಮ್ಮ ಸಂಸ್ಕಾರಯುತ ಜೀವನದೊಂದಿಗೆ ಪಡೆದುಕೊಳ್ಳುತ್ತಾರೆ. ಈ ಅರಿವು ಇಲ್ಲದೇ ಹೋದರೆ ಜೀವನಕ್ಕೆ ಅರ್ಥವೇ ಇರದು. ಇಂತಹ ವಿಷಯ ಕುರಿತ ಚರ್ಚೆಯ ಮೂಲಕ ವ್ಯಕ್ತಿಯಲ್ಲಿ ಅಡಗಿರುವ ಸ್ವಸಾಮರ್ಥ್ಯಗಳ ಅರಿವನ್ನು ಹೆಚ್ಚಿಸುವುದು ಈ ಕೃತಿಯ ಉದ್ದೇಶವಾಗಿದೆ.
©2024 Book Brahma Private Limited.