ಲೇಖಕ-ಅನುವಾದಕ ಶಿವಾನಂದ ಬೇಕಲ್ ಅವರ ಅನುವಾದಿತ ಕೃತಿ-ದೊಡ್ಡದಾಗಿ ಯೋಚಿಸುವ ಮ್ಯಾಜಿಕ್. ಆಂಗ್ಲ ಲೇಖಕ ಡೇವಿಡ್ ಡೇ ಶಾರ್ಟ್ಸ್ ಅವರು ಬರೆದ ಪ್ರೇರಣಾತ್ಮಕ ಬರಹಗಳನ್ನು ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅತ್ಯುತ್ತಮ ಉದ್ಯೋಗವನ್ನು ಹೇಗೆ ಪಡೆಯಬಹುದು ಮತ್ತು ಹೆಚ್ಚು ಸಂಪಾದನೆಯನ್ನು ಹೇಗೆ ಮಾಡಬಹುದು, ಮತ್ತು ಅವೆಲ್ಲಕ್ಕಿಂತ ಮಿಗಿಲಾಗಿ ಸುಖೀ ಹಾಗೂ ಸಂತಸದ ಜೀವನವನ್ನು ಹೇಗೆ ಸಾಗಿಸಬಹುದು ಎಂಬುದನ್ನು ಕಲಿಸುವ ಚಿಂತನೆಗಳನ್ನು ಇಲ್ಲಿಯ ಬರಹಗಳು ಒಳಗೊಂಡಿವೆ. ಸಮಸ್ಯೆಗಳನ್ನು ಪ್ರಾಯೋಗಿಕವಾಗಿ ಎದುರಿಸುವ ಕೌಶಲದ ಹೊಳವುಗಳನ್ನು ಕಾಣಬಹುದು. ಗುರಿ ತಲುಪಲು ಇದು ಹೆಚ್ಸಚು ಆದಾಯ, ಆರ್ಥಿಕ ಭದ್ರತೆ, ಪ್ರಭಾವಶಾಲಿ ವ್ಯಕ್ತಿತ್ವ, ಆದರ್ಶ ಉದ್ಯೋಗ, ಮಧುರ ಬಾಂಧವ್ಯ, ಸಂತಸಮಯ ಜೀವನ ಇತ್ಯಾದಿ ಅಂಶಗಳ ಕುರಿತು ಇಲ್ಲಿಯ ಚರ್ಚಿಸಲಾಗಿದೆ. .
©2025 Book Brahma Private Limited.