‘ಬದುಕಿನಲ್ಲಿ ಗೆಲ್ಲುವುದು ಹೇಗೆ’ ಲೇಖಕ ಉದಯಕುಮಾರ ಹಬ್ಬು ಅವರ ಕೃತಿ. ಗೊತ್ತುಗುರಿಯಿಲ್ಲದ ಶಿಕ್ಷಣ ಪದ್ಧತಿ, ಪದವೀಧರ ಯುವಕರಲ್ಲಿಯ ಒಂದು ಆತ್ಮವಿಶ್ವಾಸ ತುಂಬದೆ ನಿಜ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕೊಡದೆ, ಜಡ್ಡುಗಟ್ಟು ಹೋಗುತ್ತಿದೆ, ಪದವಿ ಪಡೆಯುವುದು, ಉದ್ಯೋಗ ಪಡೆಯುವ ಪಾಸ್ ಪೋರ್ಟ್ ಆಗಿದೆ. ಇಂತಹ ಶಿಕ್ಷಣ ಪದ್ಧತಿ ಸ್ವಾವಲಂಬಿಗಳಲ್ಲದ, ಗೊತ್ತುಗುರಿಯಿಲ್ಲದ, ಬೇಜವಾಬ್ದಾರಿ ಯುವಕರನು ಸೃಷ್ಟಿಸುವ ಕಾರ್ಖಾನೆಯಾಗುತ್ತಿದೆ. ಯುವಕರು ನೈತಿಕವಾಗಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಕುಸಿಯುತ್ತಿದ್ದಾರೆ. ಗುರಿಯಿಲ್ಲದ ಶಿಕ್ಷಣ ಆತ್ಮವಿಶ್ವಾಸ ತುಂಬದ ನೀರಸ, ನಿಜಜೀವನಕ್ಕೆ ಯಾವೊಂದು ಸಂಬಂಧವಿಲ್ಲದ ಪಠ್ಯಕ್ರಮಗಳು, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಕುಂಠಿತಗೊಳಿಸುತ್ತಿದೆ. ಈ ಶಿಕ್ಷಣ ಪದ್ಧತಿಯಿಂದ ಯುವಕರು ಮಾನವೀಯ ಮೌಲ್ಯಗಳನ್ನು ಮರೆತು, ಬೌತಿಕವಾದಿಗಳಾಗುತ್ತಿದ್ದಾರೆ. ಸಮಾಜದಲ್ಲಿ ಹೇಗಾದರೂ ಮಾಡಿ ಹಣಮಾಡಿ. ಹಣ ಮಾಡಿದವನಿಗೆ ಮಣೆ ಹಾಕುವುದು ಗುಣವಂತನಿಗಲ್ಲ ಎಂಬ ಹೊಸ ಮೌಲ್ಯವು ಯುವಕರನ್ನು ದಿಕ್ಕುತಪ್ಪಿಸುತ್ತದೆ. ಇಂಥಹ ಅನೇಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಯುವಜನರಿಗೆ ಬದುಕುವ ರೀತಿಯ ಕುರಿತು ತಿಳಿಸಿಕೊಡುವಂತಹ ಮಹತ್ವದ ವಿಚಾರಗಳನ್ನು ಲೇಖಕ ಉದಯಕುಮಾರ ಹಬ್ಬು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
©2024 Book Brahma Private Limited.