ಲೇಖಕಿ ಆರತಿ ಪಟ್ರಮೆ ಅವರ ಲೇಖನಗಳ ಸಂಗ್ರಹ ಕೃತಿ-ಬದುಕು ನಂಬಿಕೆಯ ಕಡಲು. ಇವು ಜೀವನ ಪ್ರೀತಿಯ ಬರಹಗಳು ಎಂದು ಲೇಖಕಿಯು ಉಪಶೀರ್ಷಿಕೆ ಮೂಲಕ ಕೃತಿಯ ಜೀವಾಳವನ್ನು ಹೇಳಿದ್ದಾರೆ. ತಾವು ಆಗಾಗಾ ಬರದ ಜೀವನ ಪ್ರೀತಿಯ ಬರಹಗಳನ್ನು ಸಂಕಲಿಸಿದ್ದೇ ಈ ಕೃತಿ. ಬರಹಗಳು ಜೀವನ ಪ್ರೀತಿಯನ್ನು ಸಮರ್ಥಿಸಿಕೊಳ್ಳುತ್ತವೆ. ಹತಾಶೆ-ನಿರಾಶೆಗಳನ್ನು ನಿರಾಕರಿಸುತ್ತವೆ. ನಕಾರಾತ್ಮಕ ಸಂಗತಿಗಳನ್ನು ತಿರಸ್ಕರಿಸಬೇಕು ಎಂದೂ ಕರೆ ನೀಡುತ್ತವೆ. ಜೀವನ ಪ್ರೀತಿ ಹೆಚ್ಚಿಸುವ ಇಲ್ಲಿಯ ಬರಹಗಳು ಪ್ರೇರಣಾದಾಯಕವಾಗಿವೆ.
©2024 Book Brahma Private Limited.