‘ಯಶಸ್ಸೇ ಹಾದಿ’ ಲೇಖಕ ಯತಿರಾಜ್ ವೀರಾಂಬುಧಿ ಅವರ ಲೇಖನ ಸಂಕಲನ. ಯಶಸ್ಸು ನಮ್ಮ ಬದುಕಿನ ಗಮ್ಯವಲ್ಲ, ಅದು ಸಾಧನೆಯ ಯಾನ ಎಂಬ ಉಕ್ತಿಯಿಂದ ಆರಂಭಿಸಿ, ಬದುಕಿನ ಹಲವು ಮಜಲುಗಳ ಬಗ್ಗೆ ಕಥಾರೂಪದ ಉದಾಹರಣೆಗಳ ಸಹಿತವಾಗಿ ಅತ್ಯಂತ ಸರಳವೂ, ಸುಂದರವೂ ಆದ ಶೈಲಿಯಲ್ಲಿ ಯತಿರಾಜ್ ವೀರಾಂಬುಧಿಯವರು ತಮ್ಮ ಲೇಖನಮಾಲೆಗಳ ಮೂಲಕ ಗಮನ ಸೆಳೆದಿದ್ದಾರೆ. ಈ ಕೃತಿ ಬದುಕಿನ ಬಗ್ಗೆ ಸಕಾರಾತ್ಮಕವಾದ ಚಿಂತನೆಯೊಂದಿಗೆ ಓದುಗರಲ್ಲಿ ಸ್ಫೂರ್ತಿ ತುಂಬುತ್ತದೆ.
©2025 Book Brahma Private Limited.