ಮಾಂತ್ರಿಕ ಖ್ಯಾತಿಯ ಉದಯ ಜಾದೂಗಾರ ಅವರ ಕೃತಿ-ಮಾಡಿ ನೋಡಿ ಸರಳ ಯಕ್ಷಿಣಿ. ಒಮ್ಮೆ ಕಲಿತರೆ ಯಾರಾದರೂ ಯಕ್ಷಿಣಿ ಮಾಡಬಹುದು. ಅಗತ್ಯವಾಗಿ ಬೇಕಿರುವುದು ಶ್ರದ್ಧೆ, ಸ್ವಲ್ಪ ಅಭ್ಯಾಸ. ನೋಟಿನ ಸೃಷ್ಟಿ, ಗಣಿತದ ಜಾದೂ, ಕಲ್ಲಿನಿಂದ ನೀರು, ಆಧಾರವಿಲ್ಲದ ಮಂತ್ರದಂಡ, ಬಾಗುವ ಕಿತ್ತಳೆ, ಚಾಕಲೇಟ್ ಜಾದೂ, ಇಂಡಿಯನ್ ರೋಪ್‌ಟ್ರಿಕ್, ಹೌಡಿನಿಯ ಗುಟ್ಟು ಇತ್ಯಾದಿ ಬೆರಗು ಹುಟ್ಟಿಸುವಂತಹ 81 ಯಕ್ಷಿಣಿ ತಂತ್ರಗಳನ್ನು ವಿವರಿಸುವ ಸಚಿತ್ರ ಪುಸ್ತಕವಿದು. ವೃತ್ತಿಯಿಂದ ಜಾದೂಗಾರ ಅವರು ಈ ಕೃತಿಯಲ್ಲಿ ವಿಶೇಷ ಸರಂಜಾಮುಗಳಿಲ್ಲದೆ ಯಕ್ಷಿಣಿ ಚಮತ್ಕಾರ ಮಾಡುವುದು ಹೇಗೆ ಎಂಬ ವಿವರಣೆ ನೀಡಿದ್ದಾರೆ.
©2024 Book Brahma Private Limited.