ಪವಾಡ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರು ಬರೆದ ಪ್ರೇಣಾತ್ಮಕ ಬರೆಹಗಳ ಸಂಕಲನ. ಪವಾಡಗಳನ್ನು ಯಾರೂ ಬೇಕಾದರೂ ಮಾಡಬಹುದು. ತಮ್ಮ ದೈವೀ ಶಕ್ತಿ ಇದೆ ಎಂದು ಜನರನ್ನು ವಂಚಿಸುವವರಿಂದ ದೂರ ಇರಿ. ಢೋಂಗಿ ಪವಾಡ ಮಾಡುವವರ ಉದ್ದೇಶವು ಕೈಚಳಕದ ಚಮತ್ಕಾರವಾಗಿರುತ್ತದೆ. ಅವರಲ್ಲಿ ಅತಿಶಯವಾದ ಯಾವ ಶಕ್ತಿಯೂ ಇರದು. ಅವರಂತೆ ಪ್ರತಿಯೊಬ್ಬರೂ ಪವಾಡಗಳನ್ನು ಮಾಡಿತೋರಿಸಬಹುದು ಎಂಬ ಮನೋಸ್ಥೈರ್ಯವನ್ನು ನೀಡುವ ಕೃತಿ ಇದು. ಇಂತಹ ಪವಾಡಗಳು ತರ್ಕಕ್ಕೆ ನಿಲುಕುತ್ತವೆ ಎಂದೂ ಈ ಕೃತಿ ಜನಮಾನಸದಲ್ಲಿ ಧೈರ್ಯ ನೀಡುತ್ತದೆ.
©2025 Book Brahma Private Limited.