ತೆಲುಗು ಲೇಖಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ಆಪ್ತಸಮಾಲೋಚನಗಳು ಕುರಿತು ಬರೆದ ಪ್ರೇರಣಾತ್ಮಕ ಬರಹಗಳ ಸಂಕಲನ-ಕೌನ್ಸೆಲಿಂಗ್ ಸೀಕ್ರೆಟ್ಸ್. ಲೇಖಕಿ ರಮಾ ಶ್ರೀನಿಧಿ ಅವರು ತೆಲುಗುನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಒತ್ತಡದ ಜಗತ್ತಿನಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ತುಂಬ ಪ್ರಾಮುಖ್ಯತೆ ಪಡೆದಿದೆ. ಮನೆಯೊಳಗೆ, ಹೊರಗೆ, ಕೆಲಸದಲ್ಲಿ, ಸಂಸಾರದಲ್ಲಿ ಎಲ್ಲೆಲ್ಲೂ ಕೌನ್ಸೆಲಿಂಗ್ ಬೇಕೇಬೇಕು. ಹಿಂದೆ ಈ ಕೆಲಸವನ್ನು ಅಜ್ಜಂದಿರು ಅಥವಾ ಮನೆಯಲ್ಲಿದ್ದ ಇತರ ಹಿರಿಯರು ಮಾಡುತ್ತಿದ್ದರು. ಈಗ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಚಿಕ್ಕ ಕುಟುಂಬಗಳಲ್ಲಿ ಕೌನ್ಸೆಲಿಂಗ್ ಮಾಡುವವರೂ ಕಡಿಮೆ. ಹಾಗಾಗಿ ಈ ಪುಸ್ತಕ ಮಹತ್ವ ಪಡೆಯುತ್ತದೆ. ಈ ಕೃತಿಯಲ್ಲಿ, ಆರು ಅಧ್ಯಾಯಗಳಿವೆ. ಕೌನ್ಸೆಲಿಂಗ್‌ನ ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿಲಾಗಿದೆ. ಲೇಖಕರು ನೋಡಿದ, ಓದಿದ, ಕೇಳಿದ ಪ್ರಕರಣಗಳನ್ನು ವಿವರಿಸಿದ್ದಾರೆ. ಆದರೆ, ಪಾತ್ರಗಳು, ಸನ್ನಿವೇಶಗಳು ಎಲ್ಲವೂ ಕಾಲ್ಪನಿಕ. ಹೊಸದಾಗಿ ಮನಃಶಾಸ್ತ್ರ ಅಧ್ಯಯನ ಮಾಡಲು ಬಂದವರಿಗೆ ಉಪಯುಕ್ತ ವಾಗಬಹುದು. ಮನೋವಿಜ್ಞಾನದಲ್ಲಿ ಆಸಕ್ತಿಯುಳ್ಳವರು ಓದಲೇಬೇಕಾದ ಪುಸ್ತಕವಿದು.
©2024 Book Brahma Private Limited.