ಲೇಖಕಿ ಡಾ. ಕೆ.ಎಸ್. ಚೈತ್ರಾ ಅವರ ಕೃತಿ-ಆಸೆ ಮತ್ತು ಅಗತ್ಯಗಳು ಹೇಗಿರಬೇಕು ಎಷ್ಟಿರಬೇಕು. ಮನುಷ್ಯನಿಗೆ ಆಸೆಗಳಿಗೆ ಮಿತಿ ಇಲ್ಲ. ಏನಿದ್ದರೂ ಅದಕ್ಕೆ ಆಕಾಶವೇ ಮಿತಿ ಎನ್ದನಬಹುದು. ಇಂತಹ ಆಸೆಗಳಿಗೆ ಮನುಷ್ಯ ಬೆನ್ನು ಹತ್ತಿದರೆ ಆತ ಎಂದಿಗೂ ಜೀವನದಲ್ಲಿ ನೆಮ್ಮದಿ ಕಾಣಲಾರ. ಆಸೆ ಹೆಚ್ಚಿದಷ್ಟು ಆತನಿಗೆ ಅಗತ್ಯಗಳೂ ಹೆಚ್ಚುತ್ತಾ ಹೋಗುತ್ತವೆ. ಕೊನೆಗೆ ಯಾವ ಆಸೆಯೂ ಮತ್ತು ಅಗತ್ಯವೂ ಪೂರೈಸಿಕೊಳ್ಳಲಾರದೇ ಹೋಗಬಹುದು. ಇದರಿಂದ, ಆತ ಮಾನಸಿಕವಾಗಿ ಹೆಚ್ಚು ದುರ್ಬಲನಾಗುತ್ತಾ ಹೋಗುತ್ತಾನೆ. ಮನುಷ್ಯನಿಗೆ ಆಸೆಗಳು ಇರಬೇಕು. ಇದ್ದರೆ ಅವು ಹೇಗಿರಬೇಕು. ಎಷ್ಟಿರಬೇಕು ಇಂತಹ ಸಂಗತಿಗಳ ಬಗ್ಗೆ ಚರ್ಚಿಸಿದ ಹಾಗೂ ಓದುಗರಿಗೆ ಉತ್ತಮ ಮಾಹಿತಿ ನೀಡುವ ಕೃತಿ ಇದಾಗಿದೆ. ಈ ಕೃತಿಗೆ ಭಾರತೀಯ ಮನೋವೈದ್ಯಕೀಯ ಸಂಘದ (ಕರ್ನಾಟಕ) `ಡಾ. ಎಸ್. ಎಸ್. ಜಯರಾಮ್ ಪ್ರಶಸ್ತಿ (2014) ಲಭಿಸಿದೆ. ಡಾ. ಸಿ.ಆರ್. ಚಂದ್ರಶೇಖರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.