ಖ್ಯಾತ ಲೇಖಕ ಹಾಗೂ ಅನಿವಾಸಿ ಭಾರತೀಯ ಡಾ. ದೀಪಕ್ ಚೋಪ್ರಾ ಅವರ ಕೃತಿ-`ದೇವರನ್ನು ಅರಿಯುವುದು ಹೇಗೆ?' ದೇವರು ಎಂಬ ವಿಸ್ಮಯ ಅಥವಾ ನಿಗೂಢತೆಯನ್ನು ಅರಿಯಲು ಸನಾತನ ತತ್ವಜ್ಞಾನಿಗಳು, ಜಿಜ್ಞಾಸುಗಳು ಚರ್ಚೆ ನಡೆಸಿದ್ದುಂಟು. ಆದರೆ, ದೇವರ ಇರುವನ್ನು ಭೌತಿಕವಾಗಿ ಯಾರೂ ಕಂಡವರಲ್ಲ. ದೇವರು ನಿರಾಕಾರ, ಸರ್ವಾಂತರ್ಯಾಮಿ ಎಂದೇ ಎಲ್ಲರ ಅನುಭವವಾಗಿದೆ. ಈ ಬೋಧೆಯೇ ಈವರೆಗೆ ನಡೆದುಕೊಂಡು ಬಂದಿದೆ. ಅವರವರ ದೃಷ್ಟಿಯಲ್ಲಿ, ದೇವರನ್ನು ವ್ಯಾಖ್ಯಾನಿಸಿದ್ದಾರೆ. ದೇವರ ಇರುವನ್ನು ಹೇಗೆ ಕಂಡುಕೊಳ್ಳಬೇಕು ಎಂದು ತಮ್ಮ ಅನುಭವದ ಮೂಲಕ ಹೇಳಿದ್ದಾರೆ. ಲೇಖಕರು ದೇವರನ್ನು ಕಾಣುವ ಬಗೆಯನ್ನು ಒಟ್ಟು 7 ಅರಿವಿನ ಮೆಟ್ಟಿಲುಗಳ ಮೂಲಕ ತೋರಲು ಯತ್ನಿಸಿದ್ದೇ ಈ ಕೃತಿಯ ವಿಶೇಷ. ದೇವರ ಹುಡುಕಾಟವನ್ನು ಮಾನವೀಯ ಮೌಲ್ಯಗಳಲ್ಲಿ ಕಾಣುವುದು ಸೂಕ್ತ ಎಂಬುದು ಇಲ್ಲಿಯ ಬರಹಗಳ ಮೂಲ ಅಂಶ.
©2024 Book Brahma Private Limited.