ಶಕ್ತಿಧಾಮದ ಸತ್ಯ ಕಥೆಗಳು

Author : ಜಿ.ಎಸ್. ಜಯದೇವ

Pages 112

₹ 65.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ಕೌಟುಂಬಿದ ದೌರ್ಜನ್ಯಕ್ಕೆ ಒಳಗಾಗಿ ಶಕ್ತಿಧಾಮ ಸಾಂತ್ವನ ಕೇಂದ್ರದಲ್ಲಿ ಬದುಕು ಕಟ್ಟಿಕೊಂಡ ಮಹಿಳೆಯರ ಕಥನಗಳನ್ನು ವಿವರಿಸಿರುವ ಕೃತಿ-ಶಕ್ತಿಧಾಮದ ಸತ್ಯ ಕಥೆಗಳು. ಸ್ವಾವಲಂಬಿಯಾಗಿ ಬದುಕು ನಡೆಸುವ ಮಹಿಳೆಯರಿಗೆ ಧೈರ್ಯ ತುಂಬುವ, ದಾರಿ ತೋರಿಸುವ ಪ್ರೇರಣಾತ್ಮಕವಾದ ಈ ಕೃತಿಯನ್ನು ಲೇಖಕ ಜಿ.ಎಸ್. ಜಯದೇವ ಅವರು ನೀಡಿದ್ದಾರೆ. . 

About the Author

ಜಿ.ಎಸ್. ಜಯದೇವ

ಚಾಮರಾಜನಗರದಲ್ಲಿ ನೆಲೆಸಿರುವ ಜಿ.ಎಸ್‌.ಜಯದೇವ ಅವರು 'ದೀನಬಂಧು' ಎಂಬ ಸಂಸ್ಥೆ ಪ್ರಾರಂಭಿಸಿದ್ದಾರೆ. 1992 ರಲ್ಲಿ ಆರಂಭವಾದ ಸಂಸ್ಥೆಯು ಸರ್ಕಾರಿ ಶಾಲೆಯ ಮಕ್ಕಳನ್ನು ದತ್ತು ಪಡೆದು, ಅವರಿಗೆ ವಸತಿ, ಊಟ, ಮತ್ತು ಬಟ್ಟೆಯನ್ನು ಪೂರೈಸುವ ಕಾರ್ಯ ಮಾಡುತ್ತಿದೆ. ಪ್ರಾಧ್ಯಾಪಕರಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಮೈಸೂರಿನಲ್ಲಿರುವ ಮಹಿಳಾ ಪುನರ್ವಸತಿ ಕೇಂದ್ರವಾದ 'ಶಕ್ತಿಧಾಮ'ದಲ್ಲಿ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಜಯದೇವ ಅವರು ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಅವರ ಮಗ. ಪ್ರಜಾವಾಣಿಯಲ್ಲಿ ’ಹಳ್ಳಿ ಹಾದಿ’ ಎಂಬ ಅಂಕಣ ಬರೆಯುತ್ತಿದ್ದರು. ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ...

READ MORE

Related Books