ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರು ಬರೆದ ಕೃತಿ-ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್-ಭಾಗ-2. ಜೀವನವು ಸದಾ ಸುಖದ ಸುಪ್ಪತ್ತಿಗೆಯಲ್ಲ. ಅದು ದುಃಖದ ಮನೆಯೂ ಆಗಿದೆ. ದಿನದ 24 ಗಂಟೆಯಲ್ಲಿ ದುಃಖದ ಭಾಗವೇ ಹೆಚ್ಚು. ಇಂತಹ ಸ್ಥಿತಿಯಲ್ಲಿ ಮನಸ್ಸು ನೆಮ್ಮದಿಯಾಗಿರಬೇಕೆಂದರೆ ಕಷ್ಟ. ಆಘಾತಕಾರಿ ವಿದ್ಯಮಾನಗಳು ಮನಸ್ಸನ್ನು ಅಶಾಂತಿಗೆ ದೂಡುತ್ತವೆ. ನಿರಾಶೆ. ಹತಾಶೆ, ದುಗುಡಗಳು ಸುತ್ತುವರಿಯುತ್ತವೆ. ಮನಸ್ಸು ಸ್ಥಿತಿಯಲ್ಲಿ ಉಳಿಯಲಾರದು. ಮನಸ್ಸನ್ನು ನಿಯಂತ್ರಿಸಿ ಸೀಮಿತ ಸುಖದೊಳಗೆ ನೆಮ್ಮದಿಯನ್ನು ಹೇಗೆ ಪಡೆಯಬುಹುದು ಎಂಬುದರ ಶಿಕ್ಷಣ ಅಗತ್ಯ. ಈ ನಿಟ್ಟಿನಲ್ಲಿ ಸ್ವಾಮಿ ಸುಖಬೋಧಾನಂದರ ಈ ಕೃತಿ ಹೆಚ್ಚು ಸಹಾಯಕಾರಿ. ಅವರ ಅನುಭವ ಆಧರಿತ ಜ್ನಾನ ವು ನಮಗೆ ಉತ್ತಮ ಬೊಧೆಯಾಗುತ್ತದೆ. ಮನಸ್ಸಿನ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಲು ಕಲಿತರೆ ಬದುಕು ಹೆಚ್ಚು ಸಹ್ಯವಾಗುತ್ತದೆ. ಈ ಮನೋವಿಕಾಸ ತಂತ್ರವನ್ನು ಸರಳವಾಗಿ, ಆಕರ್ಷಕವಾಗಿ ತಿಳಿಸುವ ಕೈಪಿಡಿ- `ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಭಾಗ-2` ಹತ್ತಾರು ದೃಷ್ಟಾಂತಗಳ ಮತ್ತು ನೈಜಜೀವನಘಟನೆಗಳ ಆಧಾರದಿಂದ ಈ ಪುಸ್ತಕ ಮೂಡಿಬಂದಿದ್ದು, ಈ ಕೃತಿಯ ಹೆಗ್ಗಳಿಕೆಯಾಗಿದೆ.
©2025 Book Brahma Private Limited.