‘ನಿಮ್ಮ ಭವಿಷ್ಯಕ್ಕೊಂದು ರೂಪ ಕೊಡಿ’ ಎಪಿಜೆ ಅಬ್ದುಲ್ ಕಲಾಂ ಅವರ ಇಂಗ್ಲಿಷ್ ಕೃತಿಯನ್ನು ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಸರಳತೆ, ಪ್ರಾಮಾಣಿಕತೆ, ಸ್ಫೂರ್ತಿದಾಯಕ ಬದುಕಿನ ಕುರಿತಾದ ಮಹತ್ವದ ಬರಹಗಳಿವೆ. ಭಾರತರತ್ನ, ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ಬದುಕಿನ ಅನುಭಗಳ ಜೊತೆಗೆ ಪ್ರತಿಯೊಬ್ಬರಲ್ಲೂ ಸ್ಫೂರ್ತಿಯ ಚಿಲುಮೆಯನ್ನು ಚಿಮ್ಮಿಸುವ ಮಹತ್ವದ ಬರಹಗಳನ್ನು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಮೂಲ ಕೃತಿಗೆ ಚ್ಯುತಿಯಾಗದಂತೆ ಲೇಖಕ ಮಧ್ಯಸ್ಥ ಅವರು ಕನ್ನಡೀಕರಿಸಿದ್ದಾರೆ.
©2025 Book Brahma Private Limited.