ಪ್ರೇರಣಾತ್ಮಕ ಬರಹಗಳ ಖ್ಯಾತ ಲೇಖಕ, ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರ ಕೃತಿ-ಗುಡ್ ಸ್ಟೂಡೆಂಟ್. ಸಮಯದ ಸದುಪಯೋಗ ಪಡೆದು ಉನ್ನತ ಚಿಂತನೆಯೊಂದಿಗೆ ವಿದ್ಯಾಭ್ಯಾಸಪೂರ್ಣಗೊಳಿಸುವ ವಿದ್ಯಾರ್ಥಿ ಯಶಸ್ವಿಯಾಗುತ್ತಾನೆ. ಆತನನ್ನು ಉತ್ತಮ ವಿದ್ಯಾರ್ಥಿ ಎನ್ನಬಹುದು. ಇವತ್ತಿನ ಸಮಯವನ್ನು ಹಾಳು ಮಾಡುವ ವಿದ್ಯಾರ್ಥಿಯ ಭವಿಷ್ಯವು ಕಷ್ಟದಲ್ಲಿ ತುಂಬಿರುತ್ತದೆ. ಭವಿಷ್ಯ ಉತ್ತಮವಾಗಿರಬೇಕಾದರೆ ಇಂದಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಪರೀಕ್ಷೆಗಳ ಬಗೆಗಿನ ಭಯ ಬೇಡ, ಯೋಜನಾಬದ್ಧವಾಗಿ ಓದನ್ನು ಮುಂದುವರಿಸುವುದು ಇಂತಹ ವ್ಯವಸ್ಥಿತ ಅಭ್ಯಾಸದಿಂದ ಉತ್ತಮ ವಿದ್ಯಾರ್ಥಿ ಎನಿಸಿಕೊಳ್ಳುತ್ತಾನೆ ಎಂಬ ಈ ಕೃತಿಯ ಚಿಂತನೆಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ.
©2025 Book Brahma Private Limited.