ಲೇಖಕ ಸಂತೋಷರಾವ್ ಪೆರ್ಮುಡೆ ಅವರ ಪ್ರೇರಣಾತ್ಮಕ ಲೇಖನಗಳ ಸಂಗ್ರಹ ಕೃತಿ-ಗೆಲುವೇ ಜೀವನ ಸಾಕ್ಷಾತ್ಕಾರ. ವ್ಯಕ್ತಿತ್ವ ವಿಕಸನ, ಸಾರ್ಥಕ ಜೀವನ ಮತ್ತು ಪ್ರೇರಣೆಯ ವಿಚಾರ, ಸೋಲನ್ನು ಗೆಲುವಾಗಿಸುವ ಬಗೆ, ನಗುವೇ ಆತ್ಮವಿಶ್ವಾಸ, ಸಮಯವೇ ಜೀವನ, ಕೌಶಲವಂತರಾಗುವ ರೀತಿ, ದೃಷ್ಟಿ ಮತ್ತು ದೃಷ್ಟಿಕೋನ, ಕಲಿಕೆಯ ಮಹತ್ವ, ಅವಮಾನಕ್ಕೆ ಸಾಧನೆಯ ಉತ್ತರ, ಆತ್ಮಸ್ಥೈರ್ಯ ಗಳಿಸುವ ರೀತಿ, ಪರಿವರ್ತನೆ ಜಗದ ನಿಯಮ, ಈ ಸಮಯ ಕಳೆದು ಹೋಗುತ್ತದೆ, ಶ್ರಮದ ಅನ್ನ, ಅಸಾಧ್ಯದಿಂದ ಸಾಧ್ಯದ ಕಡೆಗೆ, ಜೀವನದ ಫೋಕಸ್ ಎಲ್ಲಿಗಿರಬೇಕು?, ಬೀಜವು ಮರವಾಗಿ ಹಣ್ಣಾಗುವುದರ ಹಿಂದಿನ ಮರ್ಮ, ಆವೇಶದ ಹತೋಟಿ, ಕರ್ಮಸಿದ್ಧಾಂತ, ಸ್ಥಿತಪ್ರಜ್ಞತೆ, ದೂರದೃಷ್ಟಿತ್ವ, ಸೃಷ್ಟಿಯ ಉದ್ದೇಶ ಹೀಗೆ ವಿವಿಧ ವಿಷಯಗಳ ಕುರಿತ ಮಾಹಿತಿಯು ಇಲ್ಲಿದೆ.
©2025 Book Brahma Private Limited.