ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರ ಕೃತಿ-ಸ್ವಂತ ಉದ್ಯಮ ಆರಂಭಿಸುವುದು ಹೇಗೆ? . ಬಹುತೇಕವಾಗಿ ಎಲ್ಲ ವಿದ್ಯಾವಂತರು ಸರಕಾರಿ ನೌಕರಿಗಾಗಿ ಹಾತೊರೆಯುತ್ತಿರುತ್ತಾರೆ. ಯಾರೂ ಸಹ ತಮ್ಮ ಸ್ವಂತ ಬಂಡವಾಳದೊಂದಿಗೆ ಸ್ವಂತ ಉದ್ಯಮ ಆರಂಭಿಸುವ ಮೂಲಕ ತಾವೂ ಬೆಳೆದು ಇತರರಿಗೂ ಉದ್ಯೋಗ ನೀಡುವತ್ತ ಗಮನ ಹರಿಸುವುದೇ ಇಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇಂತಹ ಸ್ಥಿತಿಯನ್ನು ಎದುರಿಸಲು ಸ್ವಂತ ಉದ್ಯಮ ಆರಂಭಿಸುವುದೊಂದೇ ಮಾರ್ಗ. ಇದನ್ನು ಹೇಗೆ ಆರಂಭಿಸಬೇಕು ಎಂಬ ಬಗ್ಗೆ ಬಹುತೇಕರಿಗೆ ತಮ್ಮಲ್ಲಿ ಸಂಪನ್ಮೂಲಗಳಿದ್ದರೂ ಹೊಳೆದಿರುವುದಿಲ್ಲ. ಅಂತಹವರಿಗಾಗಿ ಇಲ್ಲಿ ಸಲಹೆಗಳನ್ನು ನೀಡಲಾಗಿದೆ.
©2025 Book Brahma Private Limited.