ನಾರಾಯಣ ಶೇವಿರೆ ವಿರಚಿತ ‘ಉಪಾಸನೆ’ಯ ಪುಟಪುಟಗಳಲ್ಲಿ ಚಿಂತನೆಯ ತಿಳಿ ಸುಗಂಧ ಹರಡಿದೆ. ಇದು ಆಳವಾದ ತಿಳಿಕೊಳದಂಥ ಪ್ರಶಾಂತ ಭಾಷೆಯಲ್ಲಿ ವಿಷಯವನ್ನು ಪದರ ಪದರಗಳಾಗಿ ಬಿಡಿಸಿ ಓದುಗನಿಗೆ ದಾಟಿಸುತ್ತದೆ. ಈ ಹೊತ್ತಗೆ ಭಾವಶುದ್ಧಿಯ, ತರ್ಕಬದ್ಧ ಯೋಚನೆಯ, ಮನುಷ್ಯರ ಹೃದಯಗಳಲ್ಲಿ ನಡೆಯಬೇಕಿರುವ ಸಂಸ್ಕಾರದ ಉಪಾಸನೆ. ಯಾವುದೇ ಸಮಸ್ಯೆಯನ್ನು ವಿಭಜಿಸಿ ನೋಡುವ ಬದಲು ಸಮಗ್ರವಾಗಿ ವಿವೇಚಿಸಿ ಚರ್ಚಿಸುವ ಭಾರತೀಯ ಚಿಂತನೆಯ ಅತ್ಯುತ್ತಮ ಮಾದರಿ “ಉಪಾಸನೆ” ಕೃತಿಯ ಬರಹಗಳಲ್ಲಿ ಸಿಗುತ್ತದೆ. ಇಲ್ಲಿ ಸಮಾಜ, ರಾಜಕೀಯ, ಸಂಸ್ಕೃತಿ, ಮಾನವಶಾಸ್ತ್ರ ಮುಂತಾದ ಹಲವು ವಿಚಾರಗಳ ಬಗ್ಗೆ ವಿಶಿಷ್ಟ ಒಳನೋಟಗಳನ್ನು ಹರಿಸಲಾಗಿದೆ. ಈ ಬರಹಗಳನ್ನು ಓದಿದಾಗ ವಿಷಯವನ್ನು ಹೀಗೂ ನೋಡಬಹುದಲ್ಲ, ಗ್ರಹಿಸಬಹುದಲ್ಲ ಎಂಬ ಅಚ್ಚರಿ ಮತ್ತು ಎಚ್ಚರವು ಓದುಗನಲ್ಲಿ ಮೂಡುತ್ತದೆ.
©2024 Book Brahma Private Limited.