ಮನೋವಿಜ್ಞಾನ ಉಪನ್ಯಾಸಕ ಡಾ. ಆರ್. ವೆಂಕಟರೆಡ್ಡಿ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬರೆದ ಕೃತಿ-ಸಮರ್ಥ ವಿದ್ಯಾರ್ಥಿ ಆಗುವುದು ಹೇಗೆ?. ಓದುವುದು ಒಂದು ಕಲೆ. ಹೇಗೆ ಓದಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಂಡರೆ ಆ ಓದು ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತದೆ. ಮತ್ತು, ಅದನ್ನು ತಪ್ಪಿಲ್ಲದೇ ಪುನರ್ ಉಚ್ಛರಿಸಬಹುದು. ಬರೆಯಬಹುದು. ಹೀಗಾಗಿ, ಅಂಕಗಳು ಸಹ ಹೆಚ್ಚಿಗೆ ಬರುತ್ತವೆ. ಓದುಗ ಈ ಕಲೆಯನ್ನು ತಿಳಿದರೆ ಸಮರ್ಥ ವಿದ್ಯಾರ್ಥಿಯೇ ಅಗುವುದರಲ್ಲಿ ಸಂಶಯವೇ ಇಲ್ಲ. ಓದುವುದು, ಮನನ ಮಾಡುವುದು, ನೆನಪಿನಲ್ಲಿಟ್ಟುಕೊಳ್ಳುವುದು, ಬರೆಯುವುದು, ಹೇಳುವುದು ಎಲ್ಲವೂ ಅರ್ಥಪೂರ್ಣ ಓದಿನ ವಿವಿಧ ಪ್ರಕಾರಗಳು. ಓದಿನಲ್ಲಿ ಒಂದು ಶಿಸ್ತಿದೆ. ವಿದ್ಯಾರ್ಥಿಯ ಮನಸ್ಸಿನಲ್ಲಿ ಈ ಓದು ಹೇಗೆ ಪ್ರಭಾವ ಬೀರುತ್ತದೆ. ಮಾತ್ರವಲ್ಲ; ಓದನ್ನು ಹೆಚ್ಚಾಗಿ ಪ್ರೀತಿಸುವಂತೆ ಮಾಡುತ್ತದೆ. ಬದುಕಿನ ನೆಮ್ಮದಿಯಾಗಿಯೂ ಈ ಓದು ಹೇಗೆ ಕೆಲಸ ಮಾಡುತ್ತದೆ. ಇಂತಹ ಹತ್ತು ಹಲವು ಸಂಗತಿಗಳನ್ನು ಮನೋವೈಜ್ಞಾನಿಕವಾಗಿ ವಿವರಿಸಿರುವ ಈ ಕೃತಿಯು, ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ; ದೊಡ್ಡವರಿಗೂ ಸಹ ಮಾರ್ಗದರ್ಶಿಯಾಗಿದೆ. .
©2024 Book Brahma Private Limited.