ಪ್ರೇರಣಾತ್ಮಕ ಬರಹಗಳ ಖ್ಯಾತಿಯ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ರಚಿಸಿದ ಕೃತಿ-ವೃತ್ತಿಪರ ಕೌಶಲ್ಯಗಳು. ಶಿಕ್ಷಣವು ಕೇವಲ ಪದವಿ ಪಡೆಯಲು ಇಲ್ಲ. ಅದು ಬದುಕಿನ ಉದ್ಯೋಗ ಕಂಡುಕೊಳ್ಳುವುದಾಗಿದೆ. ಆ ಮೂಲಕ ವ್ಯಕ್ತಿಯೊಬ್ಬ ತನ್ನ ಸ್ವಾವಲಂಬನೆ ಸಾಧಿಸುವುದಾಗಿದೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆ ಇದಕ್ಕೆ ತದ್ವಿರುದ್ಧವಾಗಿದೆ. ಬದುಕಿನ ರೊಟ್ಟಿಯನ್ನು ಹೇಗೆ ಕಂಡುಕೊಳ್ಳಬೇಕು ಎಂಬುದನ್ನು ಎರಡನೇ ಸಂಗತಿಯಾಗಿ ಪರಿಗಣಿಸುತ್ತದೆ. ಹೀಗಾಗಿ, ಓದಿದ ಪದವೀಧರನಿಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳಲೂ ಪರದಾಡಬೇಕಾಗುತ್ತಿದೆ. ಇದು ಇಂದಿನ ಶಿಕ್ಷಣ ವ್ಯವಸ್ಥೆಯ ವಾಸ್ತವ. ಇಂತಹ ವೈಫಲ್ಯಗಳ ಪರಿಣಾಮವಾಗಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ತಂತ್ರಜ್ಞಾನದ ಪರಿಣಾಮ ವ್ಯತ್ತಿಪರ ಕೌಶಲ್ಯಗಳು ಹೆಚ್ಚುತ್ತಿವೆ. ಅವುಗಳನ್ನು ನಿರ್ಲಕ್ಷಿಸಬಾರದು. ಅವುಗಳನ್ನು ಕಲಿಯುವತ್ತ ಆಸಕ್ತಿ ತೋರಿಸಿದರೆ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಬದುಕಿನ ಮಾರ್ಗವನ್ನು ತೋರುತ್ತವೆ ಎಂದು ಸಲಹೆಗಳನ್ನು ನೀಡುವ ಕೃತಿ ಇದು.
©2025 Book Brahma Private Limited.