ಎಲ್ಲರಿಗೂ ಬೇಕು ಸಂವಹನ ಕೌಶಲ

Author : ನಿರಂಜನ ವಾನಳ್ಳಿ

Pages 128

₹ 100.00




Year of Publication: 2014
Published by: ವಿಸ್ಮಯ ಪ್ರಕಾಶನ
Address: #366, ‘ಮೌನ’, ಎ ಮತ್ತು ಬಿ ಬ್ಲಾಕ್, ನವಿಲು ರಸ್ತೆ, ಮೈಸೂರು-570023
Phone: 09449972117

Synopsys

ಡಾ. ನಿರಂಜನ ವಾನಳ್ಳಿ ಅವರು ರಚಿಸಿದ ಕೃತಿ-ಎಲ್ಲರಿಗೂ ಬೇಕು ಸಂವಹನ ಕೌಶಲ. ವ್ಯಕ್ತಿಯಲ್ಲಿ ಸಂವಹನ ಕಲೆ ಇಲ್ಲದೇ ಹೋದರೆ ಆತ ಇತರರಿಗೆ ತನಗೇನು ಬೇಕು-ಬೇಡಗಳ ಕುರಿತು, ವಿಚಾರ-ಆಚಾರಗಳ ಕುರಿತು ಸರಿಯಾಗಿ ಮನದಟ್ಟು ಮಾಡಲಾರ. ಇತರರ ವಿಶ್ವಾಸಕ್ಕೆ ಪಾತ್ರನಾಗಲಾರ. ಇತರರ ಮನಸ್ಸನ್ನು ಗೆಲ್ಲಲಾರ. ಸೂಕ್ತವಾದ ಸಂವಹನವು ಮನುಷ್ಯ-ಮನುಷ್ಯ ಸಂಬಂಧಗಳನ್ನು ಬಲಗೊಳಿಸುತ್ತದೆ. ಮಾನವೀಯತೆ ಸಂಪರ್ಕಕ್ಕೆ ಸೇತುವಾಗುತ್ತದೆ. ಹೀಗಾಗಿ, ಸಮರ್ಥವಾದ ಸಂವಹನವು ಒಂದು ಕಲೆಯೇ ಆಗಿದೆ. ಈ ಕುರಿತು ಲೇಖಕರು ಕೆಲವೊಂದು ಆಯಾಮಗಳಲ್ಲಿ ಸಂವಹನದ ಮಹತ್ವವನ್ನು ಕೃತಿಯಲ್ಲಿ ಹೇಳಿದ್ದಾರೆ.

About the Author

ನಿರಂಜನ ವಾನಳ್ಳಿ

ನಿರಂಜನ ವಾನಳ್ಳಿ ಹುಟ್ಟಿದ್ದು(1965) ಉತ್ತರ ಕನ್ನಡ ಜಿಲ್ಲೆಯ 'ವಾನಳ್ಳಿ'ಯಲ್ಲಿ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಕವಿ, ವಿಮರ್ಶಕ, ಸಂಶೋಧಕ, ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ಪ್ರಾಧ್ಯಾಪಕ. ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದರು.  ದ.ಕ.ಜಿಲ್ಲೆಯ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಗಿದ್ದರು. ಪ್ರಸ್ತುತ ಸಂಗೀತ ವಿಶ್ವವಿದ್ಯಾನಿಲಯದ ಕುಲಸಚಿವರು.  ನಿಯತಕಾಲಿಕ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ, ಎಲ್ಲರಿಗೂ ಬೇಕು ಸಂವಹನದ ಕಲೆ, ಪತ್ರಿಕಾ ಮಂಡಳಿ ಏನು? ಎತ್ತ? ಸೇರಿದಂತೆ 'ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ-ಕವನ ಸಂಕಲನ' ಇದು 31 ನೇ ಕೃತಿ. ಕಂಡಿದ್ದು ಕಾಡಿದ್ದು-ಇವರ ಅಂಕಣ ಬರೆಹ. ಪ್ರೀತಿಗೆಷ್ಟು ಮುಖಗಳು, ಹುಡುಕಾಟದ ಹೊತ್ತು, ಆ ಕ್ಷಣದ ...

READ MORE

Related Books