ಕಾರ್ಯದಕ್ಷತೆಯ ವರ್ಧನೆಗಾಗಿ ಶಿವಸೂತ್ರಗಳು-ಈ ಕೃತಿಯನ್ನು ಅಧ್ಯಾತ್ಮಿಕ ಗುರು ಖ್ಯಾತಿಯ ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದು, ಶಿವಸೂತ್ರಗಳ ಮಹತ್ವವವನ್ನು ತಿಳಿ ಹೇಳಿದ್ದಾರೆ. ಮಂತ್ರಗಳು -ಸೂತ್ರಗಳು ಅಂದರೆ ಸಾಮಾನ್ಯ ಪದಗಳಿಗಿಂತ ಭಿನ್ನ. ಶಕ್ತಿ ಹಾಗೂ ಅವು ಹೊರಡಿಸುವ ಸಾಮರ್ಥ್ಯದಲ್ಲೂ ಸೂತ್ರಗಳು-ಮಂತ್ರಗಳೂ ಭಿನ್ನ. ಸಾಮಾನ್ಯ ಕಬ್ಬಿಣಕ್ಕೆ ಹೇಗೆ ಆಯಸ್ಕಾಂತೀಯ ಗುಣಗಳನ್ನು ತುಂಬಲಾಗುತ್ದೋ ಹಾಗೆ ಸಾಮಾನ್ಯ ಶಬ್ದಗಳಿಗೂ ಶಕ್ತಿ-ಸಾಮರ್ಥ್ಯದ ಸಂಸ್ಕಾರ ನೀಡಲಾಗಿದ್ದೇ ಮಂತ್ರಗಳು-ಸೂತ್ರಗಳು-ಶ್ಲೋಕಗಳು. ಒಬ್ಬ ವ್ಯಕ್ತಿಯ ಅಭಿವೃದ್ಧಿಯಲ್ಲಿ ಈ ಶಿವ ಸೂತ್ರಗಳು ತಮ್ಮ ಪ್ರಭಾವ ಹೇಗೆ ಬೀರುತ್ತವೆ. ಕಾರ್ಯದಕ್ಷತೆಯಲ್ಲಿ ಇವುಗಳ ಮಹತ್ವವೇನು ಇತ್ಯಾದಿ ಕುರಿತು ಸಲಹೆ ರೂಪದಲ್ಲಿ ನೀಡಿದ ಸಂದೇಶದ ಕೃತಿ ಇದು.
©2024 Book Brahma Private Limited.