ನಾಳಿನ ನಾಗರಿಕರಿಗೆ ನೂರೆಂಟು ಸಲಹೆ-ಈ ಕೃತಿಯನ್ನು ಲೇಖಕ ಸಂಪಟೂರು ವಿಶ್ವನಾಥ ಅವರು ರಚಿಸಿದ್ದು, ಉತ್ತಮ ಮಾರ್ಗದರ್ಶನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕು ರೂಪಿಸಿಕೊಳ್ಳುವಂತೆ ಪ್ರೇರಣಾತ್ಮಕವಾಗಿ ಬರೆದ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ಏಕೆಂದರೆ, ತಾರುಣ್ಯ ವಯಸ್ಸಿನಲ್ಲಿ ಸೂಕ್ತ ಮಾರ್ಗದರ್ಶನವಿಲ್ಲದೇ ಎಷ್ಟೊ ಯುವಕರು ತಮ್ಮ ವಿಚಾರ ಶಕ್ತಿಯನ್ನು, ಸಮಾಜಘಾತುಕ ಕೆಲಸಗಳಿಗೆ ಬಳಸಿಕೊಂಡು ಸಮಾಜದಲ್ಲಿ ಅಪಕೀರ್ತಿ ಪಡೆಯುತ್ತಾರೆ, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಇಂತಹ ಅನಾಹುತದಿಂದ ಯುವಕರನ್ನು ಪಾರು ಮಾಡಬೇಕೆಂಬ ಕಳಕಳಿಯಿಂದ ಲೇಖಕರು ಇಲ್ಲಿ ಸಲಹೆಗಳನ್ನು ನೀಡಿದ್ದು ವಿಶೇಷ.
©2025 Book Brahma Private Limited.