ಲೇಖಕ ರನ್ನರಾಜ ಅವರ ಕೃತಿ-ಪ್ರೀತಿ ಮತ್ತು ಸಾರ್ಥಕತೆ. ಇದು ಪ್ರೇಮಿಗಳ ಉಪನಿಷತ್ತು ಎಂಬ ಉಪಶೀರ್ಷಿಕೆಯಡಿ ವಿಷಯ ವಸ್ತುವನ್ನು ಚರ್ಚಿಸಲಾಗಿದೆ. ಪ್ರೀತಿಯು ಯುವಪ್ರೇಮಿಗಳಿಗೆ ಸರ್ವಸ್ವು. ಈ ಕಾಲಘಟ್ಟದಲ್ಲಿ ಅವರು ಯಾರ ಮಾತನ್ನೂ ಕೇಳುವುದಿಲ್ಲ. ತಮ್ಮದೇ ಸುಂದರ ಜಗತ್ತಿನಲ್ಲಿ ಇದ್ದು, ಏನಾದರೂ, ಯಾವುದನ್ನಾದರೂ ಎದುರಿಸಬಹುದು ಎಂಬ ಧೈರ್ಯ ಹೊಂದಿರುತ್ತಾರೆ. ಆದರೆ, ಅದು ವಾಸ್ತವವಾಗಿರುವುದಿಲ್ಲ. ಪ್ರೀತಿಯ ಸಾಫಲ್ಯವು ಪ್ರೇಮಿಗಳಿಬ್ಬರ ಮಧ್ಯೆ ಇರುವ ಅರಿವಿನ ತಾದಾತ್ಮಕತೆಯನ್ನು ಅವಲಂಬಿಸಿರುತ್ತದೆ. ಈ ತಾದಾತ್ಮಕತೆ ತಪ್ಪಿದರೆ ಅದು ಸಾರ್ಥಕತೆ ಪಡೆಯದು. ಪ್ರೇಮಿಗಳ ಜೀವನದಲ್ಲಿ ಹೂವಾಗಿ ಪಲ್ಲವಿಸದು. ಇಂತಹ ಜೀವನ ದುರಂತಮಯವಾಗುತ್ತದೆ. ಪ್ರೀತಿಯು ಸಾರ್ಥಕತೆ ಪಡೆದಾಗಲೇ ಆ ಪ್ರೀತಿಗೆ ಅರ್ಥವಿರುತ್ತದೆ. ಇಂತಹ ವಿಚಾರಗಳ ಪ್ರತಿಪಾದನೆಯು ಈ ಕೃತಿಯ ಜೀವಾಳವಾಗಿದೆ.
©2024 Book Brahma Private Limited.