ಲೇಖಕ-ಚಿಂತಕ-ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ರಚಿಸಿದ ಕೃತಿ-ಪಾಠ ಹೇಳುವುದು ಒಂದು ಕಲೆ. ಮನೆಯ ನಂತರ ಶಾಲೆಯನ್ನು, ಮಕ್ಕಳು ಪ್ರೀತಿಸುವ ತಾಣವಾಗಿ ಬದಲಾಯಿಸಬೇಕೆಂದರೆ ಅದು ಶಿಕ್ಷಕರಿಂದಲೇ ಸಾಧ್ಯ ಎಂಬ ಉಪಶೀರ್ಷಿಕೆಯು ಕೃತಿಯ ಒಟ್ಟು ಸಾರವನ್ನು ಹಿಡಿದಿಟ್ಟಿದೆ. ಬೋಧನೆ ಒಂದು ಕಲೆ. ಎಲ್ಲರೂ ಬೋಧಕರಾಗಬಹುದು. ಆದರೆ, ಮಕ್ಕಳಿಗೆ ತಿಳಿಯುವ ಹಾಗೆ ಹೇಳುವ ಕಲೆ ಎಲ್ಲ ಬೋಧಕರಲ್ಲಿ ಇರುವುದಿಲ್ಲ. ಪ್ರಯತ್ನಪೂರ್ವಕವಾಗಿಯೂ ಈ ಕಲೆ ಸಿದ್ಧಿಸಿಕೊಳ್ಳಬಹುದು. ಆದರೆ, ಇದಕ್ಕೆ ಸಾಕಷ್ಟು ಓದಬೇಕು. ಗಂಭೀರ ಹಾಗೂ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಹೇಳುವುದನ್ನು ಕಲಿಯಬೇಕು ಇಂತಹ ಸರಳ ಸೂತ್ರಗಳನ್ನು ಒಳಗೊಂಡ ಈ ಕೃತಿಯು, ಒಂದು ಪಠ್ಯವನ್ನು ಪರಿಣಾಮಕಾರಿಯಾಗಿ ಹೇಳುವ ಕಲೆಗಾರಿಕೆಯನ್ನು ಕಲಿಸಿಕೊಡುವತ್ತ ಕಳಕಳಿಯನ್ನು ಒಳಗೊಂಡಿರುವುದು ಅದರ ವಿಶೇಷತೆ..
©2024 Book Brahma Private Limited.