ಡಾ. ವಿರೂಪಾಕ್ಷ ದೇವರಮನೆ ಅವರು ಬರೆದ ಕೃತಿ-ಥ್ಯಾಂಕ್ಯೂ ಟೀಚರ್. ಗುರುವೇ ನಿಮ್ಮನೆಂತು ಮರೆವೆ-ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಮಕ್ಕಳ ಸಮಸ್ಯೆಗಳನ್ನು ತಾಯಿ ಬಲ್ಲಳು. ನಂತರ ಬಲ್ಲ ವ್ಯಕ್ತಿ ಎಂದರೆ ಶಿಕ್ಷಕಿ. ಹೀಗಾಗಿ, ಮಕ್ಕಳು ತಾಯಿ ಹಾಗೂ ಶಿಕ್ಷಕಿಯರ ಮಾತು ಹೊರತುಪಡಿಸಿ ಉಳಿದೆಲ್ಲರ ಮಾತು ಕೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ, ಮಕ್ಕಳ ಮನೋಜಗತ್ತನ್ನು ಅರಿಯಲು ಈ ಇಬ್ಬರಿಗೆ ಮಾತ್ರ ಹೆಚ್ಚು ಸಾಧ್ಯವಾಗುತ್ತದೆ ಎಂದು ಮನೋವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಲೇಖಕರು ತಮ್ಮ ಬರಹಗಳನ್ನು ಅರ್ಥವತ್ತಾಗಿಸಿದ್ದಾರೆ. ಮತ್ತು, ಸ್ವತಃ ಲೇಖಕರು ಮನೋವಿಜ್ಞಾನಿಯೂ ಆಗಿದ್ದರಿಂದ, ಬರಹಗಳು ಹೆಚ್ಚು ವಿಶ್ವಾಸಭರಿತ ಹಾಗೂ ಆತ್ಮೀಯವಾಗಿವೆ. ಪಾಲಕರು ತಮ್ಮ ಮಕ್ಕಳನ್ನು ಮತ್ತು ಜನಸಾನಮಾನ್ಯರೂ ಸಹ ಮಕ್ಕಳ ಮನಸ್ಸನ್ನು ಅರಿಯಲು ಸಹಾಯಕವಾಗುವ ಉತ್ತಮ ಕೈಪಿಡಿ ಮಾದರಿಯ ಕೃತಿ ಇದು.
©2025 Book Brahma Private Limited.