ಭಗವದ್ಗೀತೆಯ ಅಧ್ಯಾಯ -3ರಲ್ಲಿ ವಿವರಿಸಿರುವಂತೆ ಕರ್ಮಯೋಗದ ಬಗ್ಗೆ ತಿಳಿ ಹೇಳಿರುವ ಕೃತಿ ಇದು. ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದು, ಆಂತರಿಕ ಶಕ್ತಿಯನ್ನು ಜಾಗೃತಿಗೊಳಿಸಲು ಕರ್ಮಯೋಗವು ಪ್ರಧಾನ ಎಚ್ಚರಿಕೆಯಾಗಿದೆ ಎಂಬ ಅಂಶವನ್ನು ಇಲ್ಲಿ ಚರ್ಚಿಸಲಾಗಿದೆ. ಒಂದರ್ಥದಲ್ಲಿ, ವ್ಯಕ್ತಿಯ ಏಳು-ಬೀಳುಗಳೀಗೆ ಪವಾಡ ಎಂಬಂತೆ ಕಂಡು ಬರುವ ಕರ್ಮಯೋಗದ ಸ್ವರೂಪವೇನು? ಅದು ಹೇಗೆ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ.?ಯಾವಾಗ ತನ್ನ ಪ್ರಭಾವ ಕಡಿಮೆ ಮಾಡುತ್ತದೆ?ಕರ್ಮದ ಲೆಕ್ಕಾಚಾರ ಎಂದರೇನು? ಇಂತಹ ನಿಗೂಢ ಪ್ರಶ್ನೆಗಳಿಗೆ-ಸಂಶಯಗಳಿಗೆ ಉತ್ತರವಾಗಿಯೂ ಈ ಕೃತಿ ತಿಳಿವಳಿಕೆ ನೀಡುತ್ತದೆ.
©2024 Book Brahma Private Limited.