ಖ್ಯಾತ ಪತ್ರಕರ್ತ ಡಾ. ಪಾಟೀಲ್ ಪುಟ್ಟಪ್ಪ ಅವರ ಕೃತಿ- ‘ಸೋತೆ ಎನಬೇಡಿ, ಸೋಲಿನಲ್ಲೇ ಗೆಲುವು ಇದೆ. ಇದು ಪ್ರೇರಣಾತ್ಮಕ ವಿಚಾರಗಳಿರುವ ಕೃತಿ. ಬದುಕೆಂಬುದು ಹೂವಿನ ಹಾಸಿಗೆಯಲ್ಲ. ಅದು ಮುಳ್ಳುಗಳಿಂದಲೂ ಸುತ್ತುವರಿದಿದೆ. ಸಮಸ್ಯೆಗಳು ಬರುವುದು ಸಹಜ. ಅದನ್ನು ಧೈರ್ಯದಿಂದ ಎದುರಸಬೇಕು. ಎದುರಿಸಲು ವಿಫಲರಾದರೆ ಮತ್ತೊಮ್ಮೆ ಪ್ರಯತ್ನಿಸಬೇಕು. ಸೋತೆ ಎಂಬ ಮಾತನ್ನು ಆಡಬಾರದು. ಏಕೆಂದರೆ, ಸೋಲಿನಲ್ಲೇ ಗೆಲುವು ಇದೆ ಎಂಬುದು ಲೇಖಕರ ಮಾತು ಹಾಗೂ ಅನುಭವ. ಬದುಕಿನಲ್ಲಿ ನಿರಾಶೆ ಹಾಗೂ ಹತಾಶೆಗೊಂಡವರು ಈ ಕೃತಿ ಓದಿ, ಬದುಕನ್ನು ಪ್ರೀತಿಸಲು ಕಲಿಯಬೇಕು ಎಂಬುದು ಕೃತಿಯ ಆಶಯವಾಗಿದೆ.
©2025 Book Brahma Private Limited.