ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರ ಕೃತಿ-ಸಷ್ಟತೆ. ಜೀವನದಲ್ಲಿ ಪ್ರತಿ ವ್ಯಕ್ತಿಯೂ ಒಬ್ಬನಮೇ ಇರುವುದಿಲ್ಲ. ಅವನೊಂದಿಗೆ ಆತನ ಅಂತರ್ಮುಖವೊಂದು ಇರುತ್ತದೆ. ಇದು ಸದಾ ಮಾರ್ಗದರ್ಶಿಯಾಗಿರುತ್ತದೆ. ಅದರ ಮಾತನ್ನು ಕೇಳಬೇಕು. ಸ್ಪಂದಿಸಬೇಕು. ಅದು ಜೀವನ ಪ್ರೀತಿಯಾಗಿಯೂ , ಜೀವನ ಪ್ರೇರಣೆಯಾಗಿಯೂ ಕೆಲಸ ಮಾಡುತ್ತದೆ. ಈ ಬಗ್ಗೆ ವ್ಯಕ್ತಿಗೆ ಸ್ಪಷ್ಟತೆ ಇರಬೇಕು. ಯಾವುದೇ ಗೊಂದಲಗಳಿರಬಾರದು. ಅಂತಹ ವ್ಯಕ್ತಿಯ ಅಭಿವೃದ್ಧಿ ಸುಗಮವಾಗಿರುತ್ತದೆ. ಈ ಸ್ಪಷ್ಟತೆ ಇರದಿದ್ದರೆ ಆತ ಏಳ್ಗೆ ಹೊಂದಲಾರ. ಇದನ್ನು ಅರ್ಥ ಮಾಡಿಕೊಳ್ಳುವ ಶಿಕ್ಷಣ ಆತನಿಗಿದ್ದರೆ ಮಾತ್ರ ಆತನ ಪ್ರಗತಿ, ಅತನಿಂದ ಸುತ್ತಲಿನ ಪ್ರದೇಶದ -ಜನರ ಅಭಿವೃದ್ಧಿಯೂ ಆಗಿ ಆತ ಮತ್ತೊಬ್ಬರಿಗೆ ಮಾದರಿಯೂ ಆಗುತ್ತಾನೆ ಎಂಬ ಎಚ್ಚರಿಕೆಯ ಸಂದೇಶ ಒಳಗೊಂಡಿದೆ.
©2024 Book Brahma Private Limited.