ಸೂತ್ರಧಾರರು

Author : ಬಿ.ವಿ. ಪಟ್ಟಾಭಿರಾಮ್

Pages 152

₹ 75.00




Year of Publication: 2011
Published by: ವಾಸನ್ ಪಬ್ಲಿಕೇಷನ್ಸ್,
Address: : # 25, ವಾಸನ್ ಟವರ್, ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 08048535855

Synopsys

ಚಿಂತಕ-ಲೇಖಕ-ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ಬರೆದ ಕೃತಿ-ಸೂತ್ರಧಾರರು. ಬದುಕಿನಲ್ಲಿ ಬರೀ ಪಾತ್ರಧಾರಿಗಳಾಗದೇ ಅಂದರೆ ಮತ್ತೊಬ್ಬರ ಕಣ್ಣಳತೆಯಲ್ಲಿ ನಡೆಯುವುದಕ್ಕಿಂತ ತಮ್ಮ ಬದುಕಿನ ಸೂತ್ರಧಾರಿಗಳು ತಾವೇ ಆಗಬೇಕು ಎಂಬುದು. ಇದು ಹೇಗೆ ಸಾಧ್ಯ ಎಂಬುದನ್ನು ಹತ್ತು ಹಲವು ಮಾರ್ಗದರ್ಶಿಗಳ ಮೂಲಕ ತೋರುವ ಕೃತಿ ಇದು. `ಕೋಟಿ ಜನರಲ್ಲಿ ಒಬ್ಬರಾಗುವುದಕ್ಕಿಂತ ಕೋಟಿಯಲ್ಲಿ ಒಬ್ಬರಾಗುವುದು ಶ್ರೇಷ್ಠ'. `ಪಾತ್ರಧಾರಿಗಳಾಗಿ ಉಳಿಯಬೇಡಿ; ಸೂತ್ರಧಾರಿಗಳಾಗಿರಿ' ಹೀಗೆ ಹತ್ತು ಹಲವು ಚುರುಕಾದ ಹಾಗೂ ಚಿಕ್ಕ ಚಿಕ್ಕ ವಾಕ್ಯಗಳೊಂದಿಗೆ ಓದಿಸಿಕೊಂಡು ಹೋಗುವ ಕೃತಿ ಇದು. ಪುರಾಣ ಹಾಗೂ ಚಾರಿತ್ರಿಕ ವ್ಯಕ್ತಿ-ಘಟನೆಗಳನ್ನು ಆಧರಿಸಿ ವ್ಯಕ್ತಿತ್ವ ವಿಕಸನದ ಸೂತ್ರಗಳನ್ನು ಮನದಟ್ಟು ಮಾಡಿಕೊಡುವ ಮೂಲಕ ಓದುಗರಲ್ಲಿ ಅವರ ಸಾಮರ್ಥ್ಯದ ಕುರಿತು ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ.

About the Author

ಬಿ.ವಿ. ಪಟ್ಟಾಭಿರಾಮ್

ಲೇಖಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ವೃತ್ತಿಯಿಂದ ಮನೋವೈದ್ಯರು. ತೆಲಂಗಾಣದ ಹೈದ್ರಾಬಾದಿನಲ್ಲಿ ವಾಸಿಸುತ್ತಿದ್ದಾರೆ. ಬದುಕಿನಲ್ಲಿ ಹತಾಶೆಗೊಳ್ಳದೇ ಧೈರ್ಯದಿಂದ ಎದುರಿಸುವಂತಹ ಪ್ರೇರಣಾತ್ಮಕ ಬರಹಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪ್ರಶಾಂತಿ ಕಣನ್ಸಿಲಿಂಗ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ, ಸೇವೆ ಮಾಡುತ್ತಿದ್ದಾರೆ. ಕೃತಿಗಳು: ಪಾಠ ಹೇಳುವುದೂ ಒಂದು ಕಲೆ, ಸೂತ್ರಧಾರರು, ಕಷ್ಟಪಟ್ಟು ಕೆಲಸ ಮಾಡಬೇಡಿ; ಇಷ್ಟಪಟ್ಟು ಕೆಲಸ ಮಾಡಿ, ಟರ್ನಿಂಗ್ ಪಾಯಿಂಟ್, ಸರ್ಕಾರವೇ ಮಾತನಾಡು, ಗುಡ್ ಸ್ಟೂಡೆಂಟ್, ಜೀನಿಯಸ್ ನೀವೂ ಸಹ, ಲೀಡರ್‍ ಷಿಪ್, ಪಾಜಿಟೀವ್ ಥಿಂಕಿಂಗ್, ಕೌನ್ಸೆಲಿಂಗ್ ಸೀಕ್ರೆಟ್ಸ್, ಗೆಲುವು ನಿಮ್ಮದೇ, ...

READ MORE

Related Books