ರೂಢಿಗಳನ್ನು ಬದಲಿಸುವುದು ಹೇಗೆ? ಎಂಬುದು ಲೇಖಕ ಗುರುಪಾದ ಬೇಲೂರು (ಗುರುಪಾದ ಸ್ವಾಮಿ ಬಿ.ಜಿ) ಅವರು ಬರೆದ ಕೃತಿ. ಕೆಲವು ರೂಢಿಗಳು ಸಾಂಪ್ರದಾಯಿಕವಾಗಿರುತ್ತವೆ. ಇವು ಅರ್ಥಹೀನ ಎನಿಸಿದರೂ ಮೊದಲಿನಿಂದಲೂ ಆಚರಿಸಿಕೊಂಡು ಬರಲಾಗಿದೆ ಎಂಬ ಕಾರಣಕ್ಕೆ ಅವುಗಳನ್ನು ಮುಂದುವರಿಸುತ್ತಾ ಹೋಗುತ್ತಿರುತ್ತೇವೆ. ಹೀಗಾಗಿ, ರೂಢಿಗಳು ಪರಂಪರಾಗತವಾಗಿ ಮುಂದುವರಿಯುತ್ತಲೇ ಇರುತ್ತವೆ. ಇಂತಹ ರೂಢಿಗಳು ಬೇಗನೇ ಬದಲಾಗಲಾರವು. ಇವು ವ್ಯಕ್ತಿಯ ವಿಚಾರ-ಭಾವಗಳಲ್ಲಿ ಬೇರು ಬಿಟ್ಟು ಅಂತಹ ವರ್ತನೆಗಳಿಗೆ ಕಾರಣವಾಗುತ್ತವೆ. ವ್ಯಕ್ತಿತ್ವ ಬೆಳವಣಿಗೆಗೆ ಇಲ್ಲವೇ ಸಮಾಜದ ವಿಕಾಸಕ್ಕೆ ಕೆಲವು ರೂಢಿಗಳ ಬದಲಾವಣೆ ಅಗತ್ಯ.ಅವುಗಳನ್ನು ಸುಲಭವಾಗಿ, ಜನರಿಗೆ ತಿಳಿವಳಿಕೆ ನೀಡುವ ಮೂಲಕ ಹೇಗೆ ಬದಲಾವಣೆಗಳನ್ನು ತರಬಹುದು ಎಂಬ ಬಗ್ಗೆ ಸಕಾರಾತ್ಮಕ ಜಿಜ್ಞಾಸೆ ನಡೆಸುವ ಮೂಲಕ ಪ್ರೇರಣಾತ್ಮಕವಾಗಿ ಬರೆದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.