ಪ್ರತಿಕ್ಷಣವೂ ನಿಮ್ಮದೇ!

Author : ನಾ. ಮೊಗಸಾಲೆ

Pages 248

₹ 171.00




Year of Publication: 2020
Published by: ಸುಮ್‍ ಸುಮ್ನೆ ಪ್ರಕಾಶನ
Address: ನೊಣವಿಕೆರೆ, ಬೆಂಗಳೂರು

Synopsys

ಲೇಖಕ ಡಾ. ನಾ. ಮೊಗಸಾಲೆ ಅವರ ಕೃತಿ-ಪ್ರತಿ ಕ್ಷಣವೂ ನಿಮ್ಮದೇ!. ಬದುಕಿನ ಪ್ರತಿಕ್ಷಣದ ಸದುಪಯೋಗವಾದರೆ ಮಾತ್ರ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ತಪ್ಪಿದರೆ, ಬದುಕು ಮೂರಾಬಟ್ಟೆಯಾಗುತ್ತದೆ. ಪ್ರತಿಕ್ಷಣದ ಸದುಪಯೋಗವೇ ಬದುಕಿನ ಸೌಂದರ್ಯ-ಆನಂದ ಹೆಚ್ಚಿಸುತ್ತದೆ ಎಂಬ ಪ್ರೇರಣಾತ್ಮಕ ಲೇಖನಗಳು ಇಲ್ಲಿವೆ. ಜೊತೆಗೆ, ಸ್ವಾಮೀಜಿಗಳ ಸಂಕರ್ಪದೊಂದಿಗೆ ತಮ್ಮ ಬದುಕಿನಲ್ಲಾದ ಅನುಭವಗಳನ್ನು ತಳುಕು ಹಾಕಿದ್ದು, ಓದುವ ಪರಿಣಾಮಕತೆಯ ಹೆಚ್ಚಿಸಿದೆ. .

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books