ಪಾಠ ಹೇಳುವುದು ಒಂದು ಕಲೆ

Author : ಬಿ.ವಿ. ಪಟ್ಟಾಭಿರಾಮ್

Pages 164

₹ 95.00




Year of Publication: 2015
Published by: ವಾಸನ್ ಪಬ್ಲಿಕೇಷನ್ಸ್,
Address: # 25, ವಾಸನ್ ಟವರ್, ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 08048535855

Synopsys

ಲೇಖಕ-ಚಿಂತಕ-ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ರಚಿಸಿದ ಕೃತಿ-ಪಾಠ ಹೇಳುವುದು ಒಂದು ಕಲೆ. ಮನೆಯ ನಂತರ ಶಾಲೆಯನ್ನು, ಮಕ್ಕಳು ಪ್ರೀತಿಸುವ ತಾಣವಾಗಿ ಬದಲಾಯಿಸಬೇಕೆಂದರೆ ಅದು ಶಿಕ್ಷಕರಿಂದಲೇ ಸಾಧ್ಯ ಎಂಬ ಉಪಶೀರ್ಷಿಕೆಯು ಕೃತಿಯ ಒಟ್ಟು ಸಾರವನ್ನು ಹಿಡಿದಿಟ್ಟಿದೆ. ಬೋಧನೆ ಒಂದು ಕಲೆ. ಎಲ್ಲರೂ ಬೋಧಕರಾಗಬಹುದು. ಆದರೆ, ಮಕ್ಕಳಿಗೆ ತಿಳಿಯುವ ಹಾಗೆ ಹೇಳುವ ಕಲೆ ಎಲ್ಲ ಬೋಧಕರಲ್ಲಿ ಇರುವುದಿಲ್ಲ. ಪ್ರಯತ್ನಪೂರ್ವಕವಾಗಿಯೂ ಈ ಕಲೆ ಸಿದ್ಧಿಸಿಕೊಳ್ಳಬಹುದು. ಆದರೆ, ಇದಕ್ಕೆ ಸಾಕಷ್ಟು ಓದಬೇಕು. ಗಂಭೀರ ಹಾಗೂ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಹೇಳುವುದನ್ನು ಕಲಿಯಬೇಕು ಇಂತಹ ಸರಳ ಸೂತ್ರಗಳನ್ನು ಒಳಗೊಂಡ ಈ ಕೃತಿಯು, ಒಂದು ಪಠ್ಯವನ್ನು ಪರಿಣಾಮಕಾರಿಯಾಗಿ ಹೇಳುವ ಕಲೆಗಾರಿಕೆಯನ್ನು ಕಲಿಸಿಕೊಡುವತ್ತ ಕಳಕಳಿಯನ್ನು ಒಳಗೊಂಡಿರುವುದು ಅದರ ವಿಶೇಷತೆ..

About the Author

ಬಿ.ವಿ. ಪಟ್ಟಾಭಿರಾಮ್

ಲೇಖಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ವೃತ್ತಿಯಿಂದ ಮನೋವೈದ್ಯರು. ತೆಲಂಗಾಣದ ಹೈದ್ರಾಬಾದಿನಲ್ಲಿ ವಾಸಿಸುತ್ತಿದ್ದಾರೆ. ಬದುಕಿನಲ್ಲಿ ಹತಾಶೆಗೊಳ್ಳದೇ ಧೈರ್ಯದಿಂದ ಎದುರಿಸುವಂತಹ ಪ್ರೇರಣಾತ್ಮಕ ಬರಹಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪ್ರಶಾಂತಿ ಕಣನ್ಸಿಲಿಂಗ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ, ಸೇವೆ ಮಾಡುತ್ತಿದ್ದಾರೆ. ಕೃತಿಗಳು: ಪಾಠ ಹೇಳುವುದೂ ಒಂದು ಕಲೆ, ಸೂತ್ರಧಾರರು, ಕಷ್ಟಪಟ್ಟು ಕೆಲಸ ಮಾಡಬೇಡಿ; ಇಷ್ಟಪಟ್ಟು ಕೆಲಸ ಮಾಡಿ, ಟರ್ನಿಂಗ್ ಪಾಯಿಂಟ್, ಸರ್ಕಾರವೇ ಮಾತನಾಡು, ಗುಡ್ ಸ್ಟೂಡೆಂಟ್, ಜೀನಿಯಸ್ ನೀವೂ ಸಹ, ಲೀಡರ್‍ ಷಿಪ್, ಪಾಜಿಟೀವ್ ಥಿಂಕಿಂಗ್, ಕೌನ್ಸೆಲಿಂಗ್ ಸೀಕ್ರೆಟ್ಸ್, ಗೆಲುವು ನಿಮ್ಮದೇ, ...

READ MORE

Related Books