ಪವಾಡ ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರು ಬರೆದ ಕೃತಿ-ನಿಮ್ಮ ಖುಷಿ ನಿಮ್ಮ ಕೈಯಲ್ಲಿ. ಅಜ್ಞಾನವೇ ಎಲ್ಲ ರೀತಿಯ ಶೋಷಣೆಗೆ ಮೂಲ. ಈ ಅಜ್ಞಾನ ತೊಡೆದು ಹಾಕಲು ಅರಿವು-ತಿಳಿವಳಿಕೆ ಅಗತ್ಯ. ಈ ಹಿನ್ನೆಲೆಯಲ್ಲಿ, ನಮ್ಮ ಖುಷಿಯ ಮೂಲ ನಮ್ಮ ಮನದಲ್ಲೇ ಇದ್ದರೂ ಹೊರಗಡೆ ಅದನ್ನು ಹುಡುಕುತ್ತಿರುತ್ತೇವೆ. ವೃಥಾ ಸಮಯ ಹಾಳು ಮಾಡುತ್ತೇವೆ. ಇಂತಹ ಅಂಶಗಳನ್ನು ಒಳಗೊಂಡ ಕೃತಿಯು ನಮ್ಮ ಅರಿವೇ ನಮಗೆ ಗುರು ಎಂಬ ಅಂಶವನ್ನು ಮನದಟ್ಟು ಮಾಡಿಸುತ್ತದೆ.
©2024 Book Brahma Private Limited.