ಮನಸ್ಸೆ, ರಿಲ್ಯಾಕ್ಸ್ ಪ್ಲೀಸ್ ಭಾಗ-1

Author : ಸ್ವಾಮಿ ಸುಖಬೋಧಾನಂದ

Pages 184

₹ 108.00




Year of Publication: 2011
Published by: ಸಾಹಿತ್ಯ ಸಿಂಧು, ರಾಷ್ತ್ರೋತ್ಡಾನ ಸಾಹಿತ್ಯ
Address: ಬೆಂಗಳೂರು

Synopsys

ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರು ಬರೆದ ಕೃತಿ-ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್-ಭಾಗ-1. ಜೀವನವು ಸದಾ ಸುಖದ ಸುಪ್ಪತ್ತಿಗೆಯಲ್ಲ. ಅದು ದುಃಖದ ಮನೆಯೂ ಆಗಿದೆ. ದಿನದ 24 ಗಂಟೆಯಲ್ಲಿ ದುಃಖದ ಭಾಗವೇ ಹೆಚ್ಚು. ಇಂತಹ ಸ್ಥಿತಿಯಲ್ಲಿ ಮನಸ್ಸು ನೆಮ್ಮದಿಯಾಗಿರಬೇಕೆಂದರೆ ಕಷ್ಟ. ಆಘಾತಕಾರಿ ವಿದ್ಯಮಾನಗಳು ಮನಸ್ಸನ್ನು ಅಶಾಂತಿಗೆ ದೂಡುತ್ತವೆ. ನಿರಾಶೆ. ಹತಾಶೆ, ದುಗುಡಗಳು ಸುತ್ತುವರಿಯುತ್ತವೆ. ಮನಸ್ಸು ಸ್ಥಿತಿಯಲ್ಲಿ ಉಳಿಯಲಾರದು. ಮನಸ್ಸನ್ನು ನಿಯಂತ್ರಿಸಿ ಸೀಮಿತ ಸುಖದೊಳಗೆ ನೆಮ್ಮದಿಯನ್ನು ಹೇಗೆ ಪಡೆಯಬುಹುದು ಎಂಬುದರ ಶಿಕ್ಷಣ ಅಗತ್ಯ. ಈ ನಿಟ್ಟಿನಲ್ಲಿ ಸ್ವಾಮಿ ಸುಖಬೋಧಾನಂದರ ಈ ಕೃತಿ ಹೆಚ್ಚು ಸಹಾಯಕಾರಿ. ಅವರ ಅನುಭವ ಆಧರಿತ ಜ್ನಾನ ವು ನಮಗೆ ಉತ್ತಮ ಬೊಧೆಯಾಗುತ್ತದೆ. ಮನಸ್ಸಿನ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಲು ಕಲಿತರೆ ಬದುಕು ಹೆಚ್ಚು ಸಹ್ಯವಾಗುತ್ತದೆ. ಈ ಮನೋವಿಕಾಸ ತಂತ್ರವನ್ನು ಸರಳವಾಗಿ, ಆಕರ್ಷಕವಾಗಿ ತಿಳಿಸುವ ಕೈಪಿಡಿ- `ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಭಾಗ-1` ಹತ್ತಾರು ದೃಷ್ಟಾಂತಗಳ ಮತ್ತು ನೈಜಜೀವನಘಟನೆಗಳ ಆಧಾರದಿಂದ ಈ ಪುಸ್ತಕ ಮೂಡಿಬಂದಿದ್ದು, ಈ ಕೃತಿಯ ಹೆಗ್ಗಳಿಕೆಯಾಗಿದೆ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books