ಅರವಿಂದ ಗುಪ್ತಾ ಅವರ ಮೂಲಕೃತಿಯನ್ನು ಲೇಖಕ ವಿ.ಎಸ್.ಎಸ್. ಶಾಸ್ತ್ರೀ ಅವರ ಕನ್ನಡಕ್ಕೆ ಅನುವಾದಿಸಿದ ಕೃತಿ-ಸೈಕಲ್ ಗಳ ಮೇಲೆ ಮಹಿಳೆಯರು. ತಮಿಳುನಾಡಿನ ಪುದುಕೊಟ್ಟೈನಲ್ಲಿ ಒಂದು ಅಸಾಧಾರಣ ( 1991ರಲ್ಲಿ) ಪ್ರಯೋಗವೊಂದು ನಡೆಯಿತು. ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಫಲವಾಗಿ ಒಂದು ಲಕ್ಷಕ್ಕೂ ಹೆಚ್ಚು ಅನಕ್ಷರಸ್ಥ ಗ್ರಾಮೀಣ ಮಹಿಳೆಯರು ಓದು ಬರೆಹ ಕಲಿತರು. ಸೈಕಲ್ ಸವಾರಿಯನ್ನೂ ಕಲಿತರು. ಜಗತ್ತಿನ ಯಾವ ಭಾಗದಲ್ಲೂ ಮಹಿಳೆಯರಿಗೆ ಈ ಪ್ರಮಾಣದಲ್ಲಿ ಸ್ವಾತಂತ್ರ್ಯ ಮತ್ತು ಓಡಾಡುವ ಸಾಮರ್ಥ್ಯ ದೊರಕಿದ್ದೇ ಇಲ್ಲ. ಈ ಸ್ಫೂರ್ತಿದಾಯಕ ಘಟನೆಯನ್ನು ಅತ್ಯಾಕರ್ಷಕ ರೇಖಾಚಿತ್ರಕಥೆಯ ರೂಪದಲ್ಲಿ ಇಲ್ಲಿ ಸೆರೆ ಹಿಡಿಯಲಾಗಿದೆ. ಮಹಿಳಾ ಸ್ವಾವಲಂಬನೆ ಮತ್ತು ಸಬಲೀಕರಣಕ್ಕೆ ಈ ಕೃತಿ ಒಂದು ಅಪೂರ್ವ ಕೊಡುಗೆ.
©2024 Book Brahma Private Limited.