ಬದುಕಲು ಕಲಿಯಿರಿ

Author : ಸ್ವಾಮಿ ಜಗದಾತ್ಮಾನಂದ

Pages 480

₹ 150.00




Year of Publication: 2014
Published by: ಶ್ರೀ ರಾಮಕೃಷ್ಣ ಆಶ್ರಮ
Address: ಯಾದವಗಿರಿ, ಮೈಸೂರು.

Synopsys

ಭಾರತೀಯ ಏಳು ಭಾಷೆಗಳಲ್ಲಿ ಪ್ರಕಟವಾದ ಕೃತಿ-ಬದುಕಲು ಕಲಿಯಿರಿ. ಸ್ವಾಮಿ ಜಗದಾತ್ಮಾನಂದರು ರಚಿಸಿದ್ದು, 13ಕ್ಕೂ ಹೆಚ್ಚು ಮುದ್ರಣ ಕಂಡಿರುವ ಈ ಕೃತಿಯು 3 ಲಕ್ಷಕ್ಕೂ ಅಧಿಕ ಪ್ರಸಾರ ಕಂಡಿದೆ. ಈ ಕೃತಿಯಲ್ಲಿ 7 ಅಧ್ಯಾಯಗಳಿವೆ. ಬಿತ್ತಿದಂತೆ ಬೆಳೆ, ನಿಮ್ಮಲ್ಲಿದೆ ಅಪಾರ ಶಕ್ತಿ, ಪ್ರಾರ್ಥನೆಯಿಂದ ಪರಿವರ್ತನೆ, ಚಿಂತೆಯ ಚಿತೆಯಿಂದ ಪಾರಾಗಿ, ಪ್ರೀತಿಯ ಪ್ರಚಂಡ ಪ್ರಭಾವ, ದೇವರಿರುವರೇ? ಹೀಗೆ ವಿವಿಧ ಅಧ್ಯಾಯಗಳಡಿ ಓದುಗರ ಚಿಂತನಾ ಶಕ್ತಿಯನ್ನು ಚುರುಕುಗೊಳಿಸುವ ಪ್ರೇರಣಾತ್ಮಕ ಬರೆಹಗಳು ಈ ಕೃತಿಯಲ್ಲಿ ಒಳಗೊಂಡಿವೆ.

About the Author

ಸ್ವಾಮಿ ಜಗದಾತ್ಮಾನಂದ - 15 November 2018)

ಮೈಸೂರಿನ ರಾಮಕೃಷ್ಣಾಶ್ರಮ ಶಾರದಾಶ್ರಮದ ಸ್ವಾಮಿ ಜಗದಾತ್ಮಾನಂದರು ತಮ್ಮ ‘ಬದುಕಲು ಕಲಿಯಿರಿ’ ಎಂಬ ಪುಸ್ತಕದಿಂದ ಪ್ರಸಿದ್ಧರು. 1881ರಲ್ಲಿ ಪ್ರಕಟಿತ ಈ ಕೃತಿಯು ಹತ್ತು ಹಲವು ಭಾಷೆಗಳಲ್ಲಿ ಅನುವಾದಗೊಂಡು, 3 ಲಕ್ಷಕ್ಕೂ ಅಧಿಕ ಕೃತಿಗಳು ಮಾರಾಟವಾಗಿ ಕನ್ನಡ ಪುಸ್ತಕ ಪ್ರಕಾಶನದಲ್ಲಿ ದಾಖಲೆ ನಿರ್ಮಿಸಿದೆ. ಬದುಕಲು ಕಲಿಯಿರಿ- ಈ ಪುಸ್ತಕವು  ಏಳು ಸುದೀರ್ಘ ಅಧ್ಯಾಯಗಳನ್ನು ಒಳಗೊಂಡಿದೆ.  2018ರ ನವೆಂಬರ 15 ರಂದು ನಿಧನರಾದರು.  ...

READ MORE

Related Books