ಅಪ್ಪನೆಂದರೆ ದೇವರಲ್ಲ

Author : ರನ್ನರಾಜ

Pages 104

₹ 108.00




Year of Publication: 2020
Published by: ಸುವರ್ಣ ದೇಶ ಎಜುಕೇಷನ್ ಪ್ರೈ ಲಿ
Address: ಬೆಂಗಳೂರು-560076

Synopsys

ಲೇಖಕ ರನ್ನರಾಜ ಅವರ ಕೃತಿ-ಅಪ್ಪನೆಂದರೆ ದೇವರಲ್ಲ; ಅದರಾಚೆ ಇನ್ನೇನೋ..! ಭಾವನಾತ್ಮಕ ನೆಲೆಯಲ್ಲಿ ಅಪ್ಪನೆಂದರೆ ದೇವರ ಸಮಾನ ಎಂದೇ ತಿಳಿಯುತ್ತೇವೆ. ತಾಯಿ-ತಂದೆ-ಅತಿಥಿ - ಈ ಮೂವರು ದೇವರ ಸಮಾನ ಎಂಬುದು ಸನಾತನ ಧರ್ಮ ಹೇಳುತ್ತದೆ. ಈ ರೀತಿಯ ಶಿಕ್ಷಣದ ಪರಿಣಾಮ, ತಂದೆ ದೇವರೆಂದು ಭಾವಿಸಿ, ಆತನ ಪ್ರತಿ ವಿಚಾರ-ಭಾವ ಹಾಗೂ ವರ್ತನೆಗಳನ್ನು ಅನುಸರಿಸಬೇಕು ಎಂದು ನಮ್ಮ ಮನಸ್ಸು ನಂಬಿರುತ್ತದೆ. ಅದು ಮೌಢ್ಯವಾಗುತ್ತದೆ ಎಂಬ ವೈಚಾರಿಕ ನೆಲೆಯಲ್ಲಿ ಗ್ರಹಿಸುವುದೇ ಇಲ್ಲ. ಅಪ್ಪನೂ ಒಬ್ಬ ವ್ಯಕ್ತಿ. ತನ್ನ ಮಕ್ಕಳ ಭವಿಷ್ಯತ್ತಿನ ವಾರಸುದಾರ. ತನ್ನ ಕರ್ತವ್ಯ ನಿರ್ವಹಿಸುತ್ತಾನೆ. ಹೀಗಾಗಿ, ಅಪ್ಪ ದೇವರಲ್ಲ; ಅದರಾಚೆ ಇನ್ನೇನೋ..ಸಾಧ್ಯವಾದರೆ ದೇವರಿಗಿಂತಲೂ ದೊಡ್ಡವನೂ ಎಂದೋ, ತನ್ನ ಮಿತಿಯಲ್ಲಿ ಮಕ್ಕಳಿಗೆ ಆಸರೆ ನೀಡುವ ವ್ಯಕ್ತಿ ಎಂದೋ ಪರಿಗಣಿಸುವ ಸಾಧ್ಯತೆ ಅಥವಾ ಆ ನಿಟ್ಟಿನಲ್ಲಿ ವಿಚಾರವನ್ನು ಪ್ರೇರೇಪಿಸುವ ಕೃತಿ ಇದು.

About the Author

ರನ್ನರಾಜ

ಲೇಖಕ ರನ್ನರಾಜ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳದವರು. ಕಡೂರಿನ ಗಿರಿಯಾಪುರದಲ್ಲಿ ಪ್ರೌಢಶಿಕ್ಷಣ, ತುಮಕೂರಿನ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಪಿಯುಸಿ ಹಾಗೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಬಿ.ಎಸ್.ಸಿ. ನಂತರ ಗುಲಬರ್ಗಾ ವಿ.ವಿ.ದಿಂದ ಗಣಿತ ವಿಷಯದಲ್ಲಿ ಎಂ.ಎಸ್.ಸಿ. ಪೂರ್ಣಗೊಳಿಸಿದರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃತಿಗಳು: ಅಪ್ಪನೆಂದರೆ ದೇವರಲ್ಲ, ದುಡ್ಡು ಪ್ಲಸ್ ಮೈಂಡು, ಸೋತವನ ಸಾವಿರ ಕಥೆಗಳು, ಪ್ರೀತಿ ಮತ್ತು ಸಾರ್ಥಕತೆ ಇತ್ಯಾದಿ ...

READ MORE

Related Books