ಈ ಪುಸ್ತಕದೊಳಗಿರುವ ಎಲ್ಲಾ ಲೇಖನಗಳನ್ನು ಓದಿದ ಮೇಲೆ ಸಿ.ಬಿ. ಶೈಲಾಜಯಕುಮಾರ್ ಅವರು ವಿಭಿನ್ನವಾದ ಹಾಗೂ ಆಳವಾದ ಚಿಂತನಾ ಲಹರಿಯನ್ನು ಹೊಂದಿರುವ ಚಿಂತಕಿ ಎಂದು ಎನಿಸುತ್ತದೆ. ಪ್ರಬಂಧ ಅಥವಾ ಲೇಖನಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವ ವಿಷಯಗಳೂ ಸಹ ಬಹಳ ವಿಶಿಷ್ಠವಾಗಿವೆ ಮತ್ತು ಅತ್ಯಂತ ಸರಳವಾಗಿವೆ. ಈ ಕೃತಿಯಲ್ಲಿಯಲ್ಲಿರುವ ಕೆಲ ಬರಹಗಳು ಬಾಹ್ಯ ಒತ್ತಡಕ್ಕೆ ಸಿಲುಕಿ ಅನಿವಾರ್ಯವಾಗಿ ಬರೆದವುಗಳಾಗಿದ್ದರೆ ಹಲವು ಬರಹಗಳು ಬಹಳ ಸಹಜವಾದ ಬರಹಗಳು ಎಂದೆನಿಸುತ್ತದೆ. ಈ ಸಹಜ ಬರಹಗಳು ನಮ್ಮ ನಿತ್ಯ ಜೀವನದ ಹಾಗೂ ಬಯಲುಸೀಮೆಯ ದಿನನಿತ್ಯದ ಜೀವನ ಚಟುವಟಿಕೆಗಳನ್ನು ಅನುಭವಿಸಿ ಬರೆದಂತಹ ಲೇಖನಗಳಾಗಿವೆ.
©2024 Book Brahma Private Limited.