‘ಬಾ...ಅಳಿಲೆ...ಬಾ’ ಕೃತಿಯು ಬಿ.ಕೆ. ತಿರುಮಲಮ್ಮ ಅವರ ಶಿಶು ಗೀತೆಗಳ ಸಂಕಲನವಾಗಿದೆ. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ವಿಶೇಷವಾದ ಸ್ಥಾನಮಾನವಿದೆ. ಮಕ್ಕಳ ಸಾಹಿತ್ಯವೂ ಇತರ ಸಾಹಿತ್ಯಕ್ಕಿಂತ ಭಿನ್ನವಾಗಿದ್ದು, ಮಕ್ಕಳಿಗೆ ತಲುಪುವ ಹಾಗೆ ಭಾಷಾ ಸಾಹಿತ್ಯವಿರಬೇಕು. ಅಳಿಲು ಕತೆಯು ಮಕ್ಕಳಿಗೆ ಬಹಳಷ್ಟು ಹತ್ತಿರವಾದ ಕತೆಯಾದ ಕಾರಣ, ಲೇಖಕಿ ಈ ಕೃತಿಯ ಕೇಂದ್ರ ಕಥಾವಸ್ತುವಾಗಿ ಅಳಿಲನ್ನು ಆಯ್ಕೆಮಾಡಿಕೊಂಡಿದ್ದಾರೆ. ಇದು ಪರಿಸರ, ಪ್ರಾಣಿ-ಪಕ್ಷಿ ಹಾಗೂ ಮಕ್ಕಳ ನಡುವಿನ ಭಾಂದವ್ಯವನ್ನು ತಿಳಿಸುವ ಕೃತಿಯಾಗಿದೆ.
©2025 Book Brahma Private Limited.