ಬೆಂಗಳೂರಿನ ನಿವಾಸಿಗಳಾದ ನಮಗೆ ಪ್ರತಿದಿನ ಭಿನ್ನ ಭಿನ್ನವಾದ ಅನುಭವ ಮತ್ತು ಸಂಗತಿಗಳು ಅನಾವರಣಗೊಳ್ಳುವುದು ಸಹಜ. ಅತೀ ಧಾವಂತದ ಪಟ್ಟಣದ ಬದುಕಿನಲ್ಲಿ ಹಲವಾರು ವಿಷಯಗಳನ್ನ ಗಮನಿಸುವ, ಅದನ್ನ ವ್ಯಕ್ತಪಡಿಸುವ ಆಸಕ್ತಿ ಎಲ್ಲರಿಗೂ ಇರುವುದಿಲ್ಲ. 'ಬೆಳ್ಳಿ ಚುಕ್ಕಿ' ಸೂಕ್ಷ್ಮ ವಿಷಯಗಳೆಡೆಗೆ ಬೆರಗು ತುಂಬಿ ಬೆಳಕು ಚೆಲ್ಲಿದ ಒಂದು ವಿಭಿನ್ನ ಓದು. ಇಲ್ಲಿರುವ ಪ್ರತಿ ಅಂಕಣ ಬರಹಗಳನ್ನ ಓದಿದಾಗ 'ಹೌದಾ ಇದು ನಾನೂ ಸಹ ನೋಡಿದ, ಅನುಭವಕ್ಕೆ ಬಂದ ವಿಷಯವೇ' ಅಂತ ಓದುಗರಿಗೆ ಖಂಡಿತಾ ಅನ್ನಿಸುತ್ತದೆ. ಹಲವಾರು ಸಂಗತಿಗಳು ನಮ್ಮನ್ನ ಯೋಚನೆಗೆ ಹಚ್ಚುತ್ತವೆ ಮತ್ತು ಕಾಡುತ್ತವೆ. ರೇವತಿಯವರ ಬರೆಯುವ ಶೈಲಿ, ಪ್ರಬುದ್ಧ ಭಾಷೆಯ ಬಳಕೆ, ಆರಿಸಿಕೊಂಡ ವಿಷಯ ಓದುಗರೆಲ್ಲರಿಗೂ ಆಪ್ತವಾಗುವುದರಲ್ಲಿ ಸಂಶಯವಿಲ್ಲ ಎಂದು ದೀಪಾ ರಾವ್ ಎಮ್.ಎನ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.