ಕಣವಿಯವರದು ಕವಿ ಮನಸು. ಅದು ಕೇವಲ ಹಿರಿಯರಿಗಾಗಿ ಮಾತ್ರ ಸೀಮಿತವಾಗಿಲ್ಲ. ಚಿಣ್ಣರಿಗಾಗಿಯೂ ಕವಿತೆಗಳನ್ನು ರಚಿಸಿದ್ದಾರೆ. ಅವರ ಮಕ್ಕಳ ಕವಿತೆಗಳು ಕನ್ನಡದ ಮಕ್ಕಳ ಮನಸ್ಸನ್ನುಸೂರೆಗೊಂಡಿವೆ.
ಮಕ್ಕಳಲ್ಲಿ ಬೆರಗು ಮೂಡಿಸುವ ’ಮಿಂಚು ಹುಳು’, ’ಬಿದಿಗೆಯ ಚಂದಿರ’, ’ಮೀಯಾಂವ್ ಮೀಯಾಂವ್ ಬೆಕ್ಕಣ್ಣ’, ’ಆಮೆ’, ’ಕಪ್ಪೆ’ ಮೊದಲಾದುವುಗಳ ಕುರಿತು ಕಣವಿಯವರು ಬರೆದ ಕವಿತೆಗಳು ಸೊಗಸಾಗಿವೆ. ಈ ಕವಿತೆಗಳಲ್ಲಿನ ಸಹಜ ಪ್ರಾಸ ಪ್ರಿಯವಾಗದೇ ಇರದು.
©2025 Book Brahma Private Limited.