ಮಕ್ಕಳಿಗೆ ಚಟುವಟಿಕೆಯ ಚುರುಕು ಮತ್ತು ಉಲ್ಲಾಸವನ್ನು ಹೆಚ್ಚಿಸುವ ಕವನಗಳು ಈ ಸಂಕಲನದಲ್ಲಿ ಅಡಕವಾಗಿವೆ. ದೊಡ್ಡವರೆನಿಸಿಕೊಂಡವರು ಮಾಡಿರುವ ಅವಸ್ಥೆ, ಪರಿಸರಕ್ಕೆ ಮಾಡಿರುವ ಅನಾಚಾರವನ್ನು, ಹಕ್ಕಿ-ಹಳ್ಳಗಳ ಕಲರವವನ್ನು ಇಲ್ಲಿ ಲೇಖಕರು ಮಕ್ಕಳಿಗೆ ಮನ ಮುಟ್ಟುವಂತೆ ಸರಳವಾಗಿ ಕವನ ಎಣೆದಿದ್ದಾರೆ. ಈ ಸಂಕಲನದ ಒಂದು ಕವಿತೆಯ ಸಾಲು ಹೀಗಿದೆ
‘ಚಿಲಿಪಿಲಿ ಹಕ್ಕಿಗಳು
ನಾವು ಚಿಲಿಪಿಲಿ ಹಕ್ಕಿಗಳು
ಸಾವಿ ಕನಸು ನಮಗೂ ಉಂಟು
ಸ್ವತಂತ್ರ ಬದುಕಿನ ಬಯಕೆ ಉಂಟು
ನಾಳೆಯ ಬಗ್ಗೆ ಭರವಸೆ ಉಂಟು
ನಿಮಗೇಕೆ ಸುಮ್ನೆ ಟೆನ್ಸನ್ನು....’
ಇಂತಹ ಕವನಗಳ ಹಿಂದೆ ಸಾಮಾಜಿಕ ಹೊಣೆಗಾರಿಕೆ ಹಾಗೂ ಎಚ್ಚರಿಕೆಯನ್ನೂ ಕಾಣಬಹುದು.
©2025 Book Brahma Private Limited.