ಕವಿ ವಿಜಯಕಾಂತ ಪಾಟೀಲರು ಬರೆದ ಮಕ್ಕಳ ಕವಿತೆಗಳ ಪ್ರಥಮ ಸಂಕಲನ.
ಈ ಸಂಕಲನದ ಬಗ್ಗೆ ಸಾಹಿತಿ ವೈದೇಹಿ ಅವರು ’ಮಕ್ಕಳ ಮನಸ್ಸನ್ನು, ಕನಸನ್ನು. ಹಾಡು ಕತೆಗಳನ್ನು ಕವನರೂಪದಲ್ಲಿ ಮಕ್ಕಳ ಮಾತಿನಲ್ಲಿಯೇ ಹೇಳುವ ಪ್ರಯತ್ನ ಇಲ್ಲಿದೆ. 'ಬಾನಿನಲ್ಲೊಂದು ಮನೆಯ ಕಟ್ಟುವೆ ಹಕ್ಕಿ ತಾರೆಗಳ ಸಂಗಡ ಇರುವೆ!' ಎಂಬಲ್ಲಿ ಎಳೆಯ ಮನದ ಒಂದು ಲಹರಿಯ, 'ಅಮ್ಮ ಅಂದರೆ ಅಷ್ಟಿಷ್ಟಲ್ಲ! ಕೌದಿಯಂತೆ ಬೆಚ್ಚಗೆ' ಎಂಬಲ್ಲಿ ಮಗುವಿನ ಭಾವಕೋಶದ- ಒಟ್ಟಾರೆ ಸಂಕಲನದ ಉದ್ದಕ್ಕೂ ಹೀಗೆ ಮಗು ಜಗದ ಚಿತ್ರಣದ ಅನೇಕ ಸಾಲುಗಳಿವೆ. 'ಚಿಟ್ಟೆ ಮತ್ತು ಪುಟ್ಟ' ಕವಿತೆಯಲ್ಲಿ ತಾನು ತಿಳಿಯದೇ ಮಾಡಿದ ಕ್ರೌರ್ಯಕ್ಕೆ ನೊಂದು ನರಳುವ ಮಗುವಿನ ಸುಕೋಮಲತೆಯಿದೆ. ಮಗುವಿನ ಪ್ರಪಂಚ ಹೊಕ್ಕು ಹೊರಡುತ್ತ ಅದರ ವಿವಿಧ ಮಗ್ಗುಲುಗಳನ್ನು ಸರಳ ನುಡಿಗಳಲ್ಲಿ ಪೋಣಿಸಿ ಕವಿತೆಯಾಗಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.