ಕವಿ ಬಾಗೂರು ಮಾರ್ಕಾಂಡೇಯ ಅವರು ಮಾತೃತ್ವದ ಗೀತೆಗಳನ್ನು ‘ಲಾಲಿ ಹಾಡುಗಳು’ ಎಂಬ ಶೀರ್ಷಿಕೆಯ ಮೂಲಕ ಪ್ರಕಟಿಸಿದ ಕೃತಿ ಇದು. ಇಲ್ಲಿಯ ಬಹುತೇಕ ಗೀತೆಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಬಿ ವಿ ಶ್ರೀನಿವಾಸ್ ಸ್ವರಸಂಯೋಸಿದ್ದು, ಖ್ಯಾತ ಗಾಯಕ /ಗಾಯಕಿಯರಾದ ಕೆ ಎಸ್ ಸುರೇಖಾ, ಬಿ. ಆರ್ ಛಾಯಾ, ಮಂಗಳಾರವಿ, ಡಾ. ಶಮಿತಾ ಮಲ್ನಾಡ್, ಜ್ಯೋತಿ ರವಿಪ್ರಕಾಶ್, ಜೋಗಿ ಸುನಿತಾ, ರಮೇಶ್ಚಂದ್ರ, ಅರ್ಚನಾ ಉಡುಪ ಹೀಗೆ ಇತರರು ಹಾಡಿ, ಲಾಲಿ ಹಾಡುಗಳನ್ಇನು ಜನಮನಕ್ನ್ನುಕೆ ತಲುಪಿಸಿದ್ದಾರೆ.
ಇತ್ತೀಚಿನ ದಿನಮಾನಗಳಲ್ಲಿ ತಾಯಂದಿರು ತಮ್ಮ ಪುಟಾಣಿ ಮಕ್ಕಳಿಗೆ ತಮ್ಮ ಅಮೂಲ್ಯ ಸಮಯ ಮೀಸಲಿರಿಸಲು ಹಾಗೂ ವೃದ್ದಾಶ್ರಮಗಳನ್ನು ಕಡಿಮೆ ಮಾಡಲೋಸುಗ ಈ ಗೀತೆಗಳನ್ನು ರಚಿಸಿರುವುದಾಗಿ ಕವಿಯು ಹೇಳಿಕೊಂಡಿದ್ದಾರೆ.
©2025 Book Brahma Private Limited.