ಒಂದು ಸಮುದಾಯ ತನ್ನ ವಿವೇಕವನ್ನು ಉಪಮೆಗಳು, ರೂಪಕಗಳು, ಸಂಕೇತಗಳು, ನಾಣ್ನುಡಿಗಳು ಮತ್ತು ಗಾದೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿರುತ್ತದೆ. ಇವುಗಳ ಸಾರವನ್ನು ಮಕ್ಕಳಿಗೆ ತಿಳಿಸಿ ಕೊಡುವುದರಿಂದ ಅವರ ಭಾಷಾ ಸಾಮರ್ಥ್ಯ ಹೆಚ್ಚುತ್ತದೆ. ಜೊತೆಗೆ ಅವರ ಲೋಕಜ್ಞಾನವೂ ಬೆಳೆಯುತ್ತದೆ. ಈ ದೃಷ್ಟಿಯಿಂದ ಮಕ್ಕಳಿಗೆ ಇದೊಂದು ಉಪಯುಕ್ತ ಕೃತಿಯಾಗಿದೆ. ಮಕ್ಕಳ ಆಲೋಚನೆ ಮತ್ತು ಅರಿವನ್ನು ಹೆಚ್ಚಿಸುವುದು ಈ ಕೃತಿಯ ಉದ್ದೇಶವಾಗಿದ್ದು ನಾಣ್ನುಡಿಗಳ ಜೊತೆಗೆ ಕೆಲವು ಜನಪ್ರಿಯ ಒಗಟುಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.