ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನ-ಚಿಂವ್ ಚಿಂವ್ ಗುಬ್ಬಿ. ಮಕ್ಕಳ ಮಧುರ ಕ್ಷಣಗಳನ್ನು ಪ್ರತಿಧ್ವನಿಸುವ ಕವಿತೆಗಳಿವು. 49 ಕವಿತೆಗಳಿದ್ದು, ಪ್ರತಿ ಕವಿತೆಗೂ ಸುಂದರ ಚಿತ್ರಗಳನ್ನು ವಿನ್ಯಾಸಗೊಳಿಸಿದೆ. ತಂದೆ ತಾಯಿಯರು ತಮ್ಮ ಪುಟಾಣಿ ಕಂದನ ಬಗ್ಗೆ ಇರುವ ವಾತ್ಸಲ್ಯ, ಪ್ರೇಮ, ಮಕ್ಕಳ ತುಂಟಾಟವನ್ನು ಮಧುರ ಕ್ಷಣಗಳನ್ನು ಕವಿತೆಗಳಲ್ಲಿ ಸೆರೆಹಿಡಿಯಲಾಗಿದೆ. ಅತ್ಯಂತ ಆಪ್ತವಾಗುವ ಆ ಪಿಸುಮಾತಿನ ವಾತ್ಸಲ್ಯವನ್ನು ಹಾಗಾಗೆ ಕವಿತೆಗಟ್ಟುವ ಕುಸುರಿ ಕೆಲಸದ ಆನಂದವೂ ಕವಿತೆಯ ಜೀವಾಳವಾಗಿದೆ. ಈ ಕವಿತೆಗಳಿಗೆ ತಮ್ಮ ಮಗನೇ ಪ್ರೇರಣೆ ಎಂದು ಕವಿಯು ಹೇಳಿಕೊಂಡಿದ್ದಾರೆ.
©2025 Book Brahma Private Limited.