‘ಭಯವಾದಾಗ ಮುಖವೇಕೆ ಬಿಳಿಚಿಕೊಳ್ಳುತ್ತದೆ?’ ಕೃತಿಯು ಎ.ಓ. ಆವಲಮೂರ್ತಿ ಅವರ ಮಕ್ಕಳ ಸಾಹಿತ್ಯ ಕೃತಿಯಾಗಿದೆ. ನಮ್ಮ ಮಕ್ಕಳೆಲ್ಲ ಪುಟಾಣಿ ಗೆಲಿಲಿಯೋಗಳು, ಗೆಲಿಲಿಯೋಗಳು, ನ್ಯೂಟನ್ಗಳು, ಐನ್ಸ್ಟೈನ್ಗಳು ಆಗಬೇಕೆಂಬುದು ನನ್ನ ಆಸೆ. ಅದಕ್ಕಿಂತ ಹೆಚ್ಚಾಗಿ ಅವರು ಚಿಂತನಶೀಲರಾಗಬೇಕು, ಯಾವುದೇ ಕ್ಷೇತ್ರದಲ್ಲಾದರೂ ಪ್ರಶ್ನೆಗಳನ್ನು ಕೇಳುವ / ಕೇಳಿಕೊಳ್ಳುವ ಛಾತಿವಂತರಾಗಬೇಕು. ಕೇಳಿದ / ಕೇಳಿಕೊಂಡ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ವಿಜ್ಞಾನಿಗಳಾಗಬೇಕು; ಸುಜ್ಞಾನಿಗಳಾಗಬೇಕು. ಪ್ರಶ್ನೆಗಳಿಲ್ಲದೆ ವಿಜ್ಞಾನವಿಲ್ಲ. ಪೊಪರ್ನ ಪ್ರಕಾರ ವಿಜ್ಞಾನ ಮುಂದುವರಿಯುತ್ತಿರುವುದು ಯಾರೋ ಏನನ್ನೋ ಕಂಡುಹಿಡಿದಿದ್ದರಿಂದ ಅಲ್ಲ. ಯಾರೋ ಸರಿಯಾದ ಸಂದರ್ಭದಲ್ಲಿ ಸರಿಯಾದ ಪ್ರಶ್ನೆ ಕೇಳಿದ್ದರಿಂದ, ಹೊಸ ಹೊಸ ಪ್ರಶ್ನೆಗಳನ್ನು ಕೇಳಿಕೊಂಡು ಅವುಗಳಿಗೆ ಸರಿಯಾದ ಉತ್ತರವನ್ನು ಕಂಡುಹಿಡಿಯುವ ಪ್ರಯತ್ನ ಮಾಡುವುದು ನಿಜವಾದ ವಿಜ್ಞಾನ, ಅದೇ ವಿಜ್ಞಾನಿಯ ನಿಜವಾದ ಲಕ್ಷಣ. ವಿಜ್ಞಾನವಷ್ಟೇ ಅಲ್ಲ, ಬೇರೆಲ್ಲ ಕ್ಷೇತ್ರಗಳ ಬೆಳವಣಿಗೆ ಮತ್ತು ಸುಧಾರಣೆಯ ಚಾಲಕಶಕ್ತಿಯೂ ಚಿಂತನಶೀಲತೆಯೇ ಆಗಿದೆ. ಚಿಂತನಶೀಲತೆಯೇ ವೈಜ್ಞಾನಿಕತೆ ಮತ್ತು ವೈಚಾರಿಕತೆಯ ತಳಹದಿ, ಚಿಂತನಶೀಲರಾದವರು ಯಾರೂ ಯಾವುದೇ ಸಂದರ್ಭದಲ್ಲೂ ಮೋಸಹೋಗುವುದಿಲ್ಲ; ಮೂಢನಂಬಿಕೆಗೆ ಬಲಿಯಾಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಪತ್ರೋತ್ತರವನ್ನು ಕಥನ ರೂಪದಲ್ಲಿ - ನಿಜ ಸಂದರ್ಭಗಳ ನಡುವೆ ಸಹಜವಾಗಿ ಏಳುವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ಪ್ರಕ್ರಿಯೆಯ ರೂಪದಲ್ಲಿ - ನೀಡಲಾಗಿದೆ.
©2024 Book Brahma Private Limited.