ದುರ್ಯೋಧನನಿಗೆ ಗೊತ್ತೇ ಆಗಲಿಲ್ಲ

Author : ಪ್ರಕಾಶ್ ಆರ್. ಕಮ್ಮಾರ್

Pages 64

₹ 50.00




Year of Publication: 2014
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ವೃತ್ತಿಯಲ್ಲಿ ಗಣಿತದ ಅಧ್ಯಾಪಕರಾದ ಪ್ರಕಾಶ್ ಆರ್‍. ಕಮ್ಮಾರ್‍ ಅವರು ರಚಿಸಿರುವ ’ದುರ್ಯೋಧನನಿಗೆ ಗೊತ್ತೇ ಆಗಲಿಲ್ಲ’ ಮಕ್ಕಳ ಕವನ ಸಂಕಲನ ಕೃತಿಯಾಗಿದೆ.

ಲೇಖಕ ಪ್ರಕಾಶ್ ಆರ್‍. ಕಮ್ಮಾರರು ಮಕ್ಕಳೊಡನೆ ಸಂಪರ್ಕದಲ್ಲಿರುವ ಕ್ರಿಯಾಶೀಲ ವ್ಯಕ್ತಿ. ಮಕ್ಕಳ ಮನಸ್ಸನ್ನು ಚೆನ್ನಾಗಿ ಅರಿಯಬಲ್ಲರಾದ ಇವರು ಮಕ್ಜಳಿಗಾಗಿ ಕತೆ, ಕವನಗಳನ್ನು ರಚಿಸಿದ್ಧಾರೆ. ಮಕ್ಕಳ ಆಸಕ್ತಿ, ಇಷ್ಟ- ಕಷ್ಟಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪುಟ್ಟ ಮಕ್ಕಳಿಗೆ ಹೊರೆಯಾಗದ ಕವನಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಇಪ್ಪತ್ತು ಕವನಗಳ ಈ ಸಂಕಲನದಲ್ಲಿ ತಾಳ, ಲಯ, ಪ್ರಾಸ, ವಿಶಿಷ್ಟ, ಪದಗಳನ್ನು ಒಳಗೊಂಡ ಕವನಗಳು ಮೂಡಿಬಂದಿವೆ.

About the Author

ಪ್ರಕಾಶ್ ಆರ್. ಕಮ್ಮಾರ್
(01 April 1955)

ಲೇಖಕ ಪ್ರಕಾಶ್ ಆರ್. ಕಮ್ಮಾರ ಅವರು ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮದವರು. ತಂದೆ ಎಂ. ರಾಮಚಂದ್ರಪ್ಪ ಕಮ್ಮಾರ್, ತಾಯಿ ಮಾನವತಿ ಆರ್. ಕಮ್ಮಾರ್. ಕಲ್ಲೇದೇವರು ಗ್ರಾಮದ ಶ್ರೀ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಗೌರವ                 ಶಿಕ್ಷಕರಾಗಿ, ಸಾಗರದ ಎಚ್. ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತದ         ಖಾಯಂ ಶಿಕ್ಷಕರಾಗಿ 17 ವರ್ಷ ಸೇವೆ ನಂತರ  ಶಿವಮೊಗ್ಗದ ಡಿ.ವಿ.ಎಸ್. ಸಂಯುಕ್ತ ಪ. ಪೂ. ಕಾಲೇಜಿನ ಪ್ರೌಢಶಾಲಾ  ವಿಭಾಗದಲ್ಲಿ ಖಾಯಂ ಶಿಕ್ಷಕರಾಗಿ 7 ವರ್ಷ ಸೇವೆ ನಂತರ  ಮಾರ್ಚ್ 2015 ರಲ್ಲಿ ನಿವೃತ್ತಿಯಾದರು. ನಂತರದ ಮೂರು ವರ್ಷ ಸಂಸ್ಕೃತ ಗ್ರಾಮ ...

READ MORE

Related Books