ಮಕ್ಕಳ ಸಾಹಿತ್ಯ ರಚನೆಯಲ್ಲಿ ಜಿ.ಪಿ. ರಾಜರತ್ನಂ ಅವರ ಒಲವು ಪ್ರಶಂಸನೀಯ. ಸಂಕಲನದಲ್ಲಿ ಕನ್ನಡ ನಾಡಿನ ಕಂದನಿಗೆ, ಕಡಲೆಪುರಿ, ಕುರುಬನ ಕುರಿ, ಕಳ್ಳ ಮಲ್ಲ, ಛೂ! ಛೂ! ಛೂ!, ನವಿಲು, ಕಳ್ಳ ರಂಗಪ್ಪ ಹೀಗೆ ಒಟ್ಟು 18 ಕವಿತೆಗಳು ಮಕ್ಕಳ ಮನವನ್ನು ಸೆಳೆಯುತ್ತವೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರ ಮನಸ್ಸಿನಲ್ಲಿ ಪರಕಾಯ ಪ್ರವೇಶ ಎಂಬಂತೆ ಸಿದ್ಧಿಗೈದು ಬರೆವ ಕೆಲವೇ ಕೆಲವು ಕವಿಗಳ ಪೈಕಿ ಜಿ.ಪಿ. ರಾಜರತ್ನಂ ಪ್ರಮುಖರು. ಬಹುತೇಕ ಕವನಗಳಿಗೆ ಆಕರ್ಷಕ ಚಿತ್ರಗಳನ್ನು ಬಿಡಿಸಿರುವುದು ಕವನದ ಸಾಹಿತ್ಯಕ್ಕೆ ಮತ್ತಷ್ಟು ಮೆರುಗು ಹೆಚ್ಚಿದೆ.
©2025 Book Brahma Private Limited.